ವೈದ್ಯರಿಂದ ಮಗು ಅದಲುಬದಲು ಆರೋಪ : ಪೋಷಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

new-born-baby-1
ದಾವಣಗೆರೆ,ಜು.7-ನವಜಾತ ಶಿಶುವನ್ನು ವೈದ್ಯರು ಅದಲುಬದಲು ಮಾಡಿದ್ದಾರೆ ಎಂದು ಆರೋಪಿಸಿ ಪೋಷಕರು ಮತ್ತು ಸಂಬಂಧಿಕರು ಪ್ರತಿಭಟಿಸಿ ವೈದ್ಯರನ್ನು ಘೇರಾವ್ ಮಾಡಿದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹರಿಹರ ತಾಲ್ಲೂಕಿನ ಯಲವಟ್ಟಿ ಗ್ರಾಮದ ಆಶಾಬಾಯಿ ಎಂಬಾಕೆಗೆ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಜನನ ನೀಡಿದರು. ಮಗು ಹುಟ್ಟಿದ ಕೂಡಲೇ ಸಿಬ್ಬಂದಿ ಗಂಡುಮಗು ಎಂದು ಸಂಬಂಧಿಕರಿಗೆ ತಿಳಿಸಿದ್ದರು. ಆದರೆ ಒಂದು ಗಂಟೆಯ ನಂತರ ಬಿಟ್ಟುಕೊಂಡು ನಿಮಗೆ ಹುಟ್ಟಿರುವುದು ಹೆಣ್ಣು ಎಂದು ಹೇಳಿದ್ದಾರೆ.

ಆಶಾ ಬಾಯಿ ಮನೆಯವರು ವೈದ್ಯರು ಗಂಡು ಮಗುವಿನ ಬದಲು ನಮಗೆ ಹೆಣ್ಣು ಮಗು ನೀಡಿದ್ದಾರೆ. ಮಗುವನ್ನು ಅದಲುಬದಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ವೈದ್ಯರನ್ನು ಘೇರಾವ್ ಮಾಡಿ, ತಮಗೆ ಗಂಡು ಮಗು ಬೇಕು ಎಂದು ಹಠ ಹಿಡಿದರು. ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಪೆÇಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸಿಬ್ಬಂದಿಯ ಅಚಾತುರ್ಯದಿಂದ ಹೀಗಾಗಿದೆ ಎಂದು ವೈದ್ಯರು ಸಮಜಾಯಿಷಿ ನೀಡಿದರು.

Facebook Comments

Sri Raghav

Admin