ಕಟಾವು ಮಾಡಿದ ಬಾಳೆ ಬುಡದಲ್ಲಿ ಮತ್ತೆ ಬೆಳದ ಬಾಳೆ ಗೊನೆ ..!

ಈ ಸುದ್ದಿಯನ್ನು ಶೇರ್ ಮಾಡಿ

Banana--01

ಚಿಂತಾಮಣಿ, ಜು.7- ತಾಲೂಕಿನ ಪವಿತ್ರ ಯಾತ್ರಾ ಸ್ಥಳವಾದ ಮುರಗಮಲ್ಲಾ ಬೆಟ್ಟದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಕಟಾವು ಮಾಡಿದ ಬಾಳೆ ಗಿಡದ ಬುಡದಲ್ಲಿ ಕಾಯಿಗಳು ಬಿಟ್ಟು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಸಿದ್ದಿ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಮುರಗಮಲ್ಲಾ ಬೆಟ್ಟದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಎರಡನೇ ವಾರ್ಷಿಕೋತ್ಸವ ಮತ್ತು ಗಣಪತಿ ಹಾಗೂ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಕಳೆದ ಒಂದು ವಾರದ ಹಿಂದೆ ನೆರವೇರಿತು.

ದೇವಾಲಯದ ಆವರಣದಲ್ಲಿ ಬೆಳೆಸಲಾಗಿದ್ದ ಬಾಳೆಗಿಡಗಳನ್ನು ಕಾರ್ಯಕ್ರಮಕ್ಕೆ ಬಳಸಲಾಗಿತ್ತು. ಏಳು ಬಾಳೆ ಗಿಡಗಳ ಮಧ್ಯೆ ಇರುವ ದೊಡ್ಡ ಗಾತ್ರದ ಬಾಳೆ ಗಿಡವನ್ನು ಕತ್ತರಿಸಲ್ಪಟ್ಟಿದ್ದು ಆ ಬಾಳೆ ಗಿಡದ ಬುಡದಲ್ಲಿ ಹೂ ಬಿಟ್ಟು ನಂತರ ಕಾಯಿಗಳಾಗುತ್ತಿರುವುದು ಕಾಣಿಸುವ ಮೂಲಕ ಅಚ್ಚರಿ ಮೂಡಿಸಿದೆ.
ದೇವಾಲಯದ ಬಳಿ ಬೆಳೆಸಿರುವ ಬಾಳೆ ಗಿಡಗಳಲ್ಲಿ ಎಂಟು ಗಿಡಗಳಲ್ಲಿ ಮದ್ಯದಲ್ಲಿದ್ದ ಚೆನ್ನಾಗಿರುವ ಬಾಳೆ ಗಿಡದಲ್ಲಿ ಒಂದು ಗೊನೆ ಬಿಟ್ಟಿತ್ತು. ಅದನ್ನು ಕತ್ತರಿಸಿದ ನಂತರ ಕಳೆದವಾರ ಅಯ್ಯಪ್ಪ ಸ್ವಾಮಿ ಎರಡನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಬಾಳೆಗೊನೆ ಬಿಟ್ಟಿದ್ದ ಬಾಳೆಗಿಡವನ್ನು ಕತ್ತರಿಸಲ್ಪಟ್ಟಿದ್ದು ಏಳು ಬಾಳೆ ಗಿಡಗಳ ಮದ್ಯ ಇರುವ ಈ ಬುಡದಲ್ಲಿ ಬಾಳೆ ಹಣ್ಣು ಬಿಟ್ಟಿರುವುದು ಭಗವಂತನ ಮಹಿಮೆ ಎಂದು ದೇವಾಲಯದ ವ್ಯವಸ್ಥಾಪಕ ನಾಗರಾಜ್ ತಿಳಿಸಿದ್ದಾರೆ.

ಸಿದ್ದಿ ಕ್ಷೇತ್ರವರಿಂದ ಪ್ರಸಿದ್ಧಿ ಪಡೆದಿರುವ ಇಲ್ಲಿ ಕತ್ತರಿಸಿದ್ದ ಬಾಳೆ ಗಿಡದ ಬುಡದಲ್ಲಿ ಬಾಳೆಕಾಯಿ ಬಿಟ್ಟಿರುವುದನ್ನು ಕಳೆದರಡು ದಿನಗಳಿಂದ ವೀಕ್ಷಣೆ ಮಾಡಲು ಹೆಚ್ಚಿನ ಭಕ್ತಾದಿಗಳು ಬಂದು ವೀಕ್ಷಣೆ ಮಾಡುವ ಮೂಲಕ ಬುಡದಲ್ಲಿ ಬಾಳೆಕಾಯಿ ಬಿಟ್ಟಿರುವ ಬಗ್ಗೆ ಆಶ್ವಯ ವ್ಯಕ್ತಪಡಿಸುತ್ತಿದ್ದರಲ್ಲದೆ ಇದು ಅಯ್ಯಪ್ಪ ದೇವರ ಮಹಿಮೆ ಎನ್ನುತ್ತಿದ್ದಾರೆ ಅರ್ಚಕ ನಾಗಭೂಷಣಾಚಾರಿ.

Facebook Comments

Sri Raghav

Admin