ಪ್ರಾಂಶುಪಾಲ, ಶಿಕ್ಷಕರು, ವಿದ್ಯಾರ್ಥಿಗಳಿಂದ ಬಾಲಕಿ ಮೇಲೆ ಸತತ 7 ತಿಂಗಳು ಗ್ಯಾಂಗ್‍ ರೇಪ್ ..!

ಈ ಸುದ್ದಿಯನ್ನು ಶೇರ್ ಮಾಡಿ

Gag-aRape--01

ಛಾಪ್ರಾ, ಜು.6- ಬಿಹಾರದ ಛಾಪ್ರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂಥ ನೀಚ ಕೃತ್ಯ ನಡೆದಿದೆ. ಪ್ರಾಂಶುಪಾಲ, ಇಬ್ಬರು ಶಿಕ್ಷಕರು ಮತ್ತು 15 ವಿದ್ಯಾರ್ಥಿಗಳು ಶಾಲಾ ಬಾಲಕಿಯೊಬ್ಬಳಿಗೆ ಬ್ಲಾಕ್‍ಮೇಲ್ ಮಾಡಿ ಏಳು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆನ್ನಲಾದ ಪ್ರಕರಣ ವರದಿಯಾಗಿದೆ.
ಈ ಸಂಬಂಧ ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇರೆಗೆ ಪ್ರಾಂಶುಪಾಲ, ಶಿಕ್ಷಕರು ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಬಾಲಕಿ ನೀಡಿದ ಹೇಳಿಕೆ ಆಧರಿಸಿ, ಛಾಪ್ರಾದ ಪರ್ಸಾಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  2017ರ ಡಿಸೆಂಬರ್‍ನಲ್ಲಿ ತಮ್ಮ ತಂದೆ ಜೈಲಿಗೆ ಹೋದ ನಂತರ ದೀಪೇಶ್ವರ್ ಜ್ಞಾನ ನಿಕೇತನ್ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ. ಜಾಮೀನಿನ ಮೇಲೆ ತಂದೆ ಜೈಲಿನಿಂದ ಹಿಂದಿರುಗಿದ ನಂತರ ಇಡೀ ಘಟನೆಯನ್ನು ತಿಳಿಸಿದ್ದಳು.

2017ರ ಡಿಸೆಂಬರ್‍ನಲ್ಲಿ ಶಾಲೆಯ ಶೌಚಾಲಯದಲ್ಲಿ ಮೂವರು ಸಹಪಾಠಿಗಳು ತಮ್ಮ ಮೇಲೆ ಮೊದಲ ಬಾರಿ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಆರೋಪಿಗಳು ನನ್ನ ಮೇಲೆ ಬಲಾತ್ಕಾರ ಮಾಡಿ ಆ ದೃಶ್ಯಗಳನ್ನು ವಿಡಿಯೋ ಮಾಡಿ ಬ್ಲಾಕ್‍ಮೇಲ್ ಮಾಡುತ್ತಿದ್ದರು. ತಮ್ಮ ಕೃತ್ಯವನ್ನು ಯಾರಿಗಾದರೂ ಹೇಳಿದರೆ ದೃಶ್ಯವನ್ನು ಸಾರ್ಜನಿಕವಾಗಿ ಪ್ರದರ್ಶಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದೇ ವಿಷಯವಾಗಿ ತನ್ನನ್ನು ಬೆದರಿಸಿ ಗ್ಯಾಂಗ್ ರೇಪ್ ಮಾಡಿದರು ಎಂದು ವಿದ್ಯಾರ್ಥಿನಿ ದೂರಿದ್ದಾಳೆ.

ಕೆಲವು ದಿನಗಳ ನಂತರ ವಿದ್ಯಾರ್ಥಿಗಳು ಇತರ ಸಹಪಾಠಿಗಳಿಗೆ ವಿಡಿಯೋ ಶೇರ್ ಮಾಡಿದ್ದರು. ನಂತರ ಅವರೂ ಕೂಡ ಅನೇಕ ಸಂದರ್ಭಗಳಲ್ಲಿ ಬ್ಲಾಕ್‍ಮೇಲ್ ಮಾಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದರು ಎಂದು ಎಫ್‍ಐಆರ್‍ನಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.

Facebook Comments

Sri Raghav

Admin