ಬಿಂದಿ ಧರಿಸಿ ಕಿರುಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಮದರಸಾದಿಂದ ಹೊರಹಾಕಿದರು

ಈ ಸುದ್ದಿಯನ್ನು ಶೇರ್ ಮಾಡಿ

bindi-girl
ತಿರುವನಂತಪುರಂ,ಜು.7- ಬಾಲಕಿಯೊಬ್ಬಳು ಕಿರು ಚಲನಚಿತ್ರದ ಅಭಿನಯನಕ್ಕಾಗಿ ಬಿಂದಿ ಧರಿಸಿದಕ್ಕೆ ಮದರಸಾದಿಂದಲೇ ಅವಳನ್ನು ಹೊರ ಹಾಕಿರುವ ಘಟನೆ ಉತ್ತರ ಕೇರಳದಲ್ಲಿ ನಡೆದಿದೆ. 5 ನೇ ತರಗತಿ ವಿದ್ಯಾರ್ಥಿನಿ ಬಿಂದಿ ಧರಿಸಿ ಅಭಿನಯಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಮದರಸಾದ ಆಡಳಿತ ಮಂಡಳಿ ಶಾಲೆಯಿಂದಲೇ ಹೊರಹಾಕಿದೆ.  ಬಿಂದಿ ಧರಿಸಿರುವುದು ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಆದ್ದರಿಂದ ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಮದರಸಾ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ.  ಬಾಲಕಿಯ ಆಕೆಯ ಈ ಕುರಿತು ತಮ್ಮ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು, ಇದೀಗ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಮದರಾಸ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Facebook Comments

Sri Raghav

Admin