ಭೂತಾನ್ ಪ್ರಧಾನಿ ಭೇಟಿ ಮಾಡಿದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahukl-Gandhi--0

ನವದೆಹಲಿ, ಜು.7-ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಇಂದು ಭೂತಾನ್ ಪ್ರಧಾನಮಂತ್ರಿ ಶೇರಿಂಗ್ ಟೊಬ್‍ಗೇ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ನಡುವೆ ವಿಶೇಷ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಕುರಿತು ಚರ್ಚಿಸಿದರು. ನಾನು ನವದೆಹಲಿಯಲ್ಲಿ ಇಂದು ಭೂತಾನ್ ಪ್ರಧಾನಿ ಶೇರಿಂಗ್ ಟೊಬ್‍ಗೇ ಅವರನ್ನು ಭೇಟಿ ಮಾಡಿದೆ. ಭಾರತ-ಭೂತಾನ್ ನಡುವೆ ವಿಶೇಷ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದೂ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದೆವು ಎಂದು ಸಭೆ ನಂತರ ರಾಹುಲ್ ಟ್ವೀಟ್ ಮಾಡಿದ್ದಾರೆ.

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಭೂತಾನ್ ಪ್ರಧಾನಿ ಅವರು ನಿನ್ನೆ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ಶೇರಿಂಗ್ ಟೊಬ್‍ಗೇ ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದಾರೆ.

Facebook Comments

Sri Raghav

Admin