ನೈಜತೆಯೇ ನಿಬ್ಬೆರೆಗಾಗುವಂತ ಅದ್ಭುತ ಕಲಾಕೃತಿಗಳ ಸೃಷ್ಟಿಯನ್ನ ಮಿಸ್ ಮಾಡ್ಕೊಳ್ಳದೇ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ds

ತೈವಾನ್ ಕಲಾವಿದನೊಬ್ಬ ತಮ್ಮ ದೇಶದ ಬದುಕಿನ ಚಿತ್ರಣಗಳನ್ನು ಅತ್ಯಂತ ಪುಟ್ಟ ಕಲಾಕೃತಿಗಳಲ್ಲಿ ಮೂಡಿಸಿ ಬೆರಗುಗೊಳಿಸಿದ್ದಾನೆ. ಈ ಪ್ರತಿಭಾವಂತನ ಕಲಾ ಪ್ರೌಢಿಮೆ ಬಗ್ಗೆ ಇಲ್ಲೊಂದು ವರದಿ.  ತೈವಾನ್ ರಾಜಧಾನಿ ತೈಪೆಯ ಒಳಾಂಗಣ ವಿನ್ಯಾಸಕಾರ ಹ್ಯಾಂಕ್ ಚೆಂಗ್ ತಮ್ಮ ದೇಶದ ಜನಜೀವನ ಹಾಗೂ ಬದುಕಿನ ಚಿತ್ರಣಗಳನ್ನು ಅತ್ಯಂತ ಪುಟ್ಟ ಕಲಾ ಪ್ರತಿಬಿಂಬಿಗಳ ಮೂಲಕ ಸೃಷ್ಟಿಸಿ ಎಲ್ಲರ ಗಮನಸೆಳೆದಿದ್ದಾರೆ. ತಾನು ಕಳೆದ ಜೀವನದ ಚಿತ್ರಗಳನ್ನು ಭವಿಷ್ಯದ ನೆನೆಪಿಗಾಗಿ ರಕ್ಷಿಸಿಡುವ ಪ್ರಯತ್ನವಾಗಿ ಈ ಪುಟ್ಟ ಪುಟ್ಟ ಕಲಾಕೃತಿಗಳು ಈ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದಿವೆ.

ds-1

ಅತ್ಯಂತ ನೈಜವಾಗಿರುವ ಈ ಪುಟ್ಟ ಕಲಾಕೃತಿಗಳನ್ನು ನೋಡಿ 35,000ಕ್ಕೂ ಹೆಚ್ಚು ಮಂದಿ ಹ್ಯಾಂಕ್ ಚೆಂಗ್ ಅಭಿಮಾನಿಗಳಾಗಿದ್ದಾರೆ.
ಚೆಂಗ್ ಮೂರು ವರ್ಷಗಳ ಹಿಂದೆ ಪುಟ್ಟ ಮಾದರಿಯನ್ನು ನಿರ್ಮಿಸಿದ್ದರು. ಜಪಾನ್‍ನಲ್ಲಿ ತಾನು ವ್ಯಾಸಂಗ ಮಾಡುವಾಗ ಭೇಟಿ ನೀಡುತ್ತಿದ್ದ ರೆಸ್ಟೋರೆಂಟ್‍ನ ಪ್ರತಿರೂಪ ಅದಾಗಿತ್ತು.  ಆನಂತರ ಇದು ಚೆಂಗ್‍ನ ಹವ್ಯಾಸವಾಯಿತು. ತುಂಬಾ ಪುಟ್ಟ ಪುಟ್ಟ ಮಾದರಿಗಳಲ್ಲಿ ಬೀದಿ ದೃಶ್ಯಗಳು, ಕಟ್ಟಡಗಳು, ಮನೆಗಳು, ಕಾರುಗಳು, ಅಂಗಡಿ-ಮುಂಗಟ್ಟುಗಳು ಅತ್ಯಂತ ನೈಜವಾಗಿ ರೂಪುಗೊಳಿಸಿರುವುದು ಈ ಕಲಾವಿದ ಕಲಾಪ್ರೌಢಿಮೆಗೆ ಸಾಕ್ಷಿಯಾಗಿದೆ. ಹಲವಾರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಚೆಂಗ್ ಕಲಾಕೃತಿಗಳಿಗೆ ದೇಶ-ವಿದೇಶಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.  ಪುಟ್ಟ ಪ್ರಪಂಚದೊಳಗೆ ತನ್ನನ್ನು ತಾನು ಪರಿಚಯಿಸಿ ಕೊಳ್ಳುವುದು ಈ ಕಲಾವಿದನ ಉದ್ದೇಶ. ಇದು ನೋಡಲು ಅತ್ಯಂತ ಸುಂದರವಾಗಿ ಕಾಣಿಸಿದರೂ, ಇದು ತುಂಬಾ ಸೂಕ್ಷ್ಮ ಮತ್ತು ತಾಳ್ಮೆಯ ಕೌಶಲ ಕೆಲಸ. ಚೆಂಗ್ ಕೆಲವೊಮ್ಮೆ ತನ್ನ ಕಲಾಕೃತಿ ನಿರ್ಮಾಣಕ್ಕಾಗಿ ದಿನಕ್ಕೆ 12 ಗಂಟೆಗಳನ್ನು ವ್ಯಯಿಸುತ್ತಾರೆ.

ds-2

ds-4 ds-5 ds-6 ds-7 ds-8 ds-9 ds-10 ds-11 ds-12 ds-13 ds-14 ds-15 ds-17 ds-18 ds-19

Facebook Comments

Sri Raghav

Admin