ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಬೆಂಗಳೂರು ನೂತನ ಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

DC-Vijay-Kumar
ಬೆಂಗಳೂರು, ಜು.7- ಬೆಂಗಳೂರು ನೂತನ ಜಿಲ್ಲಾಧಿಕಾರಿ ವಿಜಯಶಂಕರ್ ಅವರು ಒತ್ತುವರಿ ತೆರವು ಆಪರೇಷನ್ ಪ್ರಾರಂಭಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಿಂಭಾಗದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆಯನ್ನು ಇಂದು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ಬಂಡಿಕೊಡುಗೆಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಸ್ಥಳಕ್ಕೆ ತೆರಳಿದ್ದ ಜಿಲ್ಲಾಧಿಕಾರಿ ವಿಜಯಶಂಕರ್ ಅವರು, ಈ ಸ್ಥಳವನ್ನು ತೆರವುಗೊಳಿಸಿದ್ದಾರೆ.

ಏರ್’ಪೋರ್ಟ್’ನಿಂದ ನೀರು ಹೊರ ಹೋಗುವ ರಾಜಕಾಲುವೆ ಇದಾಗಿದ್ದು, ಸುಮಾರು 35 ಗುಂಟೆಯ ಒಂದು ಕಿ.ಮೀ. ದೂರದ ಈ ಜಾಗ ಒತ್ತುವರಿಯಾಗಿತ್ತು. ಇದನ್ನು ಜಿಲ್ಲಾಧಿಕಾರಿಯವರು ತೆರವುಗೊಳಿಸಿದ್ದಾರೆ. ಅಲ್ಲದೆ, ಬಾಗಲೂರಿನಲ್ಲಿರುವ ಉಪತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಜನರ ಕುಂದುಕೊರತೆ ವಿಚಾರಿಸಿದ್ದಾರೆ. ನಾಡಕಚೇರಿಯಿಂದ ಏನಾದರು ತೊಂದರೆಯಾಗಿದೆಯಾ? ದುಡ್ಡು ಕೇಳ್ತಾರಾ ಎಂದು ವಿಚಾರಿಸಿದ್ದಾರೆ. ಜನರಿಗೆ ತೊಂದರೆ ಕೊಡದಂತೆ ಕೆಲಸ ಮಾಡಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

Facebook Comments