ಶಾಲೆಯ ಬಿಸಿಯೂಟದ ಅಡುಗೆ ಮನೆ ಮುಂದೆ ನಿಂಬೆಹಣ್ಣು, ಕೋಳಿ ಕೊಯ್ದು ವಾಮಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Black-MAgic

ಕೆ.ಆರ್.ಪೇಟೆ, ಜು.8-ದುಷ್ಕರ್ಮಿಗಳು ಶಾಲೆಯ ಬಿಸಿಯೂಟದ ಅಡುಗೆ ಮನೆ ಮುಂದೆ ಕುಂಕಮ ಚೆಲ್ಲಿ, ನಿಂಬೆಹಣ್ಣು ಮತ್ತು ಕೋಳಿ ಕುಯ್ದು ಎಕ್ಕದ ಎಲೆಯಲ್ಲಿಟ್ಟು ವಾಮಾಚಾರ ನಡೆಸಿರುವ ಘಟನೆ ತಾಲೂಕಿನ ಹೊಸಹೊಳಲು ಗ್ರಾಮದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ ಎಂದಿನಂತೆ ಅಡುಗೆ ಮನೆಯ ಬಾಗಿಲನ್ನು ತೆರೆಯಲು ಅಡುಗೆ ಸಿಬ್ಬಂದಿ ತೆರಳಿದಾಗ ಇದನ್ನು ನೋಡಿ ಗಾಬರಿಯಾಗಿದ್ದಾರೆ. ಕೋಳಿ ರಕ್ತವೆಲ್ಲಾ ಚೆಲ್ಲಾಡಿದೆ. ತಕ್ಷಣ ಸಾವರಿಸಿಕೊಂಡು ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ.

ಮುಖ್ಯ ಶಿಕ್ಷಕ ಅವರು ತಕ್ಷಣ ಸ್ಥಳಕ್ಕೆ ತೆರಳಿ ಅಡುಗೆ ಸಿಬ್ಬಂದಿಯವರಿಗೆ ಸಾಂತ್ವನ ಹೇಳಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಿಗೆ ಸುದ್ದಿಮುಟ್ಟಿಸಿ ಸ್ಥಳೀಯ ಪುರಸಭಾ ಸದಸ್ಯ ನಂಜುಂಡಯ್ಯನವರನ್ನು ಶಾಲೆಗೆ ಕರೆಸಿಕೊಂಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಸದಸ್ಯರು ಅಡುಗೆಯವರಿಗೆ ಧೈರ್ಯಹೇಳಿ ಎಂದಿನಂತೆ ಮಕ್ಕಳಿಗೆ ಉಪಾಹಾರ ಮಾಡುವಂತೆ ತಿಳಿಸಿ ಅಲ್ಲಿದ್ದ ಮಾಟದ ಸಾಮಗ್ರಿಗಳನ್ನು ಖಾಲಿ ಮಾಡಿಸಿದ್ದಾರೆ. ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಠಿಸುತ್ತಿರುವ ಸರಕಾರದ ಶ್ರಮವು ಕಿಡಿಗೇಡಿಗಳ ಇಂತಹ ಕ್ರಮದಿಂದ ಹಾಳಾಗುತ್ತದೆ.

ಕೂಡಲೆ ಇಂತಹ ಕಿಡಿಗೇಡಿಗಳ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿ ಮಕ್ಕಳ ಪೋಷಕರಲ್ಲಿನ ಭಯದ ವಾತಾವರಣವನ್ನು ಕಿತ್ತೊಗೆಯಬೇಕಾದ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕರು ಹೊರಬೇಕಾಗಿದೆ ಎಂದು ನಂಜುಂಡಯ್ಯ ಹೇಳಿದರು. ಘಟನೆಯ ಬಗ್ಗೆ ಮುಖ್ಯ ಶಿಕ್ಷಕ ಡಿ.ಅಶೋಕ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ನೀಡಿರುವುದಾಗಿ ಹೇಳಿದ್ದಾರೆ.

Facebook Comments

Sri Raghav

Admin