ಸಿನಿಮಾ ಸ್ಟೈಲಲ್ಲಿ ಕಲ್ಯಾಣ ಮಂಟಪದಿಂದ ವಧು ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

Bride
ಮೈಸೂರು, ಜು.8- ಮಧುಮಗಳು ಮದುವೆ ಮಂಟಪದಿಂದಲೇ ಪ್ರಿಯಕರ ನೊಂದಿಗೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ಹುಲ್ಲಹಳ್ಳಿಯ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನೆರವೇರಬೇಕಿದ್ದ ವಿವಾಹವು ಮುಹೂರ್ತಕ್ಕೆ ಕೆಲವೇ ಕ್ಷಣಗಳ ಮುನ್ನ ಮಧುಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಎಚ್.ಡಿ.ಕೋಟೆ ಹೊಸಹಳ್ಳಿಯ ದಂಪತಿಯ ಪುತ್ರಿ ವಿವಾಹವನ್ನು ನಾರಾಯಣ ಎಂಬ ಹುಡುಗನೊಂದಿಗೆ ನಿಶ್ಚಯಿಸಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಮುಹೂರ್ತ ಸಮೀಪಿಸುತ್ತಿದ್ದಂತೆ ಮದುವೆ ಮಂಟಪದಲ್ಲಿ ಸೇರಿದ್ದ ಬಂಧು-ಮಿತ್ರರ ಕಣ್ತಪ್ಪಿಸಿ ಮಧುಮಗಳು ಪರಾರಿಯಾಗಿದ್ದಾಳೆ.

ಮೊದಲಿಗೆ ಇಲ್ಲೇ ಎಲ್ಲೋ ಇರಬೇಕೆಂದು ಮಧುಮಗಳನ್ನು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಅಷ್ಟೊತ್ತಿಗೆ ಪ್ರಿಯಕರನೊಂದಿಗೆ ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಮದುವೆ ಮಂಟಪದಲ್ಲಿ ಆತಂಕ ಮನೆ ಮಾಡಿದ್ದು, ಪೋಷಕರ ದಿಗ್ಭ್ರಾಂತರಾಗಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin