7 ತಿಂಗಳ ಗರ್ಭಿಣಿ ಹೆಂಡತಿಯನ್ನು ನೇಣು ಬಿಗಿದು ಕೊಂದ ಗಂಡ..!

ಈ ಸುದ್ದಿಯನ್ನು ಶೇರ್ ಮಾಡಿ

Hang--01

ಮೈಸೂರು,ಜು.8-ಏಳು ತಿಂಗಳ ಗರ್ಭಿಣಿಯನ್ನು ಪತಿಯೇ ಕೊಲೆಗೈದಿರುವ ಅಮಾನವೀಯ ಘಟನೆ ನಡೆದಿದೆ. ನಂಜನಗೂಡು ಪಟ್ಟಣದ ನೀಲಕಂಠ ಬಡಾವಣೆ ನಿವಾಸಿ ಲಕ್ಷ್ಮಿ(21) ಕೊಲೆಯಾದ ದುರ್ದೈವಿ.  ಕಳೆದ 10 ತಿಂಗಳ ಹಿಂದೆ ಮೈಸೂರು ತಾಲ್ಲೂಕಿನ ಕಡಕೋಳ ಬಳಿ ಇರುವ ಕೊಂಚನಹಳ್ಳಿ ಗ್ರಾಮದ ವಿಜಯ್ ಎಂಬಾತನ ಜೊತೆ ಲಕ್ಷ್ಮಿ ಅವರ ವಿವಾಹವಾಗಿತ್ತು. ನೀಲಕಂಠನಗರ ಬಡಾವಣೆಯಲ್ಲಿ ಬಾಡಿಕೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಲಕ್ಷ್ಮಿ 7 ತಿಂಗಳ ಗರ್ಭಿಣಿಯಾಗಿದ್ದಳು. ವಿಜಯ್ ಮದ್ಯ ವ್ಯಸನಿಯಾಗಿದ್ದು, ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ಕೂಡ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಕುಪತಿಗೊಂಡಿದ್ದ ವಿಜಯ್ ತಡರಾತ್ರಿ ರೂಮ್‍ನಲ್ಲಿ ಲಕ್ಷ್ಮಿಯನ್ನು ಕೊಲೆ ಮಾಡಿ ನಂತರ ನೇಣು ಬಿಗಿದು ಪರಾರಿಯಾಗಿದ್ದಾನೆ ಎಂದು ಮೃತಳ ತಂದೆ ಶೇಖರ್ ಪೊಲೀಸರಿಗೆ ತಿಳಿಸಿದ್ದಾರೆ.  ಆರೋಪಿ ವಿಜಯ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸರ್ಕಲ್ ಇನ್‍ಸ್ಪೆಕ್ಟರ್ ಶಿವಮೂರ್ತಿ ಪರಿಶೀಲಿಸಿ ಶವವನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ರವಾನಿಸಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin