ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ರಕ್ತಚಂದನ ವಶ

ಈ ಸುದ್ದಿಯನ್ನು ಶೇರ್ ಮಾಡಿ

Rakshchandara-Red-Sandal

ಕನಕಪುರ,ಜು.8- ಸಾಮೀಲ್‍ವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಎರಡು ಟನ್ ರಕ್ತಚಂದನವನ್ನು ಕನಕಪುರ ಹಾಗೂ ಆಂಧ್ರಪ್ರದೇಶದ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ.  ಕನಕಪುರದ ದೇಗುಲ ಮಠದ ರಸ್ತೆಯಲ್ಲಿರುವ ನಂದಕುಮಾರ್ ಅವರ ಮಿಲ್‍ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 30ರಿಂದ 40 ಲಕ್ಷ ಮೌಲ್ಯದ ಎರಡು ಟನ್ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಆಂಧ್ರದ ತಿರುಪತಿಯಲ್ಲಿನ ಪ್ರಮುಖ ವೃತ್ತದ ಬಳಿ ಪೊಲೀಸರು ನುಮಾನಗೊಂಡು ತಮಿಳುನಾಡು ಮೂಲದ ಇಬ್ಬರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 20 ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಂಡು ವಿಚಾರಣೆಗೊಳಪಡಿಸಿದಾಗ ನೀಡಿದ್ದ ಮಾಹಿತಿ ಆಧರಿಸಿ ಆಂಧ್ರ ಪೊಲೀಸರು ಕನಕಪುರ ಪೊಲೀಸರ ಸಹಕಾರದೊಂದಿಗೆ ಈ ದಾಳಿ ನಡೆಸಿದ್ದಾರೆ. ಕನಕಪುರ ಸರ್ಕಲ್ ಇನ್‍ಸ್ಪೆಕ್ಟರ್ ಮಲ್ಲೇಶ್ ಸೇರಿದಂತೆ ಆಂಧ್ರದ ಕೆಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿದ್ದರು.

Facebook Comments

Sri Raghav

Admin