ಕಾಂಗ್ರೆಸ್ ಮುಖಂಡ, ಮೇಘಾಲಯ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Jakob

ಕೊಟ್ಟಾಯಂ, ಜು.8- ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮೇಘಾಲಯದ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಕೆಲವು ದಿನಗಳಿಂದ ಜಾಕೋಬ್ (92) ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ನಾಳೆ ಪಾಲಾಯೈನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಜಾಕೋಬ್ ಪಾಲ್ಗೊಳ್ಳಬೇಕಾಗಿತ್ತು. ಅವರ ನಿಧನದಿಂದ ಪಕ್ಷದ ಇಂದು ಮತ್ತು ನಾಳೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ . ಜಾಕೋಬ್ ಅವರು 1982 ಮತ್ತು 1986ರಲ್ಲಿ ಮೇಲ್ಮನೆಯ ಉಪಸಭಾಪತಿಯಾಗಿ, ರಾಜೀವ್ ಗಾಂಧಿ ಹಾಗೂ ಪಿ.ವಿ.ನರಸಿಂಹರಾವ್ ಅವರ ಅವಧಿಯಲ್ಲಿ ಜಲಸಂಪನ್ಮೂಲ ಹಾಗೂ ಗೃಹ ವ್ಯವಹಾರಗಳ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Facebook Comments

Sri Raghav

Admin