ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide--01

ಹನೂರು, ಜು.8- ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲೊಕ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ. ಹನೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರ ಲೊಕ್ಕನಹಳ್ಳಿ ಗ್ರಾಮದ ಮುತ್ತು ಎಂಬುವವರ ಪತ್ನಿ ಪಾರ್ವತಿ (46) ಮೃತ ದುರ್ದೈವಿ.
ಕಳೆದ ನಾಲ್ಕು ತಿಂಗಳ ಹಿಂದೆ ಮುತ್ತು ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ್ದರು. ಪತಿ ಮರಣ ನಂತರ ಜೀವನ ಸಾಗಿಸಲು ಜಂಜಾಟ ಪಡುತ್ತಿದ್ದ ಈಕೆ ಜಿಗುಪ್ಸೆಗೊಂಡು ಕಳೆದೆರಡು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು.

ಲೊಕ್ಕನಹಳ್ಳಿ ಗ್ರಾಮದ ಹೊರ ವಲಯ ದೊಡ್ಡ ಕೆರೆ ಬಳಿ ಆಕೆಯ ಹೆಜ್ಜೆ ಗುರುತನ್ನು ಕಂಡು ಅನುಮಾನಿಸಿದ್ದ ಗ್ರಾಮಸ್ಥರು ಕೆರೆಗೆ ಬಿದ್ದಿರಬಹುದೆಂದು ಊಹಿಸಿ ಕೆರೆಯಲ್ಲಿ ಹುಡುಕಾಡಿದರು. ಮೃತ ದೇಹ ನೀರಿನಲ್ಲಿ ಪತ್ತೆಯಾಗಿದೆ. ಹನೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷ ಪರಶುರಾಮ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಳ ಮಗ ಮಹೇಂದ್ರ ದೂರು ನೀಡಿದ್ದು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Facebook Comments

Sri Raghav

Admin