ಬೆಳಿಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ಏನನ್ನು ನೋಡಬೇಕು..? ಏನನ್ನು ನೋಡಲೇಬಾರದು..?

ಈ ಸುದ್ದಿಯನ್ನು ಶೇರ್ ಮಾಡಿ

Morning--01
ತಂತ್ರಜ್ಞಾನ ಎಷ್ಟೇ ಬೆಳೆದರೂ, ಮೊಬೈಲ್ ನಲ್ಲೆ ವಿಶ್ವದರ್ಶನವಾಗುತ್ತಿದ್ದರೂ, ಕ್ಷಣಮಾತ್ರದಲ್ಲೇ ಪ್ರಪಂಚದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಲೈವ್ ಸಂಪರ್ಕ ಸಾಧಿಸುವ ಕಾಲ ಬಂದಿದೆಯಾದರೂ ಇಂದಿಗೂ ಕೆಲವು ನಂಬಿಕೆಗಳು ಮಾತ್ರ ಬದಲಾಗಿಲ್ಲ ಅವುಗಳು ನಂಬಿಕೆಗಳೋ ಅಥವಾ ಮೂಢನಂಬಿಕೆಗಳೋ ಗೊತ್ತಿಲ್ಲ, ಆದರೂ ಇಂದಿಗೂ ಆಚರಣೆಯಲ್ಲಿವೆ. ಕೆಲಸ ಸರಿಯಾಗಿ ಆಗದಿದ್ದರೆ ಅಥವಾ ಹಾಕಿಕೊಂಡ ಯೋಜನೆಗಳು ನೇರವೆರದಿದ್ದರೆ ಬೆಳಿಗ್ಗೆ ಯಾರ ಮುಖ ನೋಡಿದೆನೋ ಎಂದು ಗೊಣಗುತ್ತಾರೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುತ್ತಾರೆ. ಪುರಾಣಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಏನನ್ನು ನೋಡಬಾರದು ಎಂದು ತಿಳಿಸಲಾಗಿದೆ.

ಬೆಳಿಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಬಿಟ್ಟುಕೊಂಡ ಹೆಂಡತಿಯನ್ನು ನೋಡಬಾರದು ಹಾಗೆ ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಪ್ರಾಣಿಗಳ ಅದರಲ್ಲೂ ಕ್ರೂರ ಪ್ರಾಣಿಗಳ ಪೋಟೋವನ್ನು ನೋಡಬಾರದು ಎಂದು ಹೇಳುತ್ತಾರೆ. ಆದರೆ ಗೋವಿನ ಮುಖ ನೋಡಬಹುದು. ಏಕೆಂದರೆ ಗೋವಿನಲ್ಲಿ ಅಷ್ಟದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಅದಕ್ಕಾಗಿ ಬೆಳಿಗ್ಗೆ ಗೋವಿನ ದರ್ಶನ ಮಾಡಿದ್ದರೆ ಅಷ್ಟದೇವತೆಗಳ ದರ್ಶನ ಮಾಡಿದ ಪುಣ್ಯ ದೊರಕುತ್ತದೆಯಂತೆ.

ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಭೂಮಿತಾಯಿ ಹಾಗೂ ಸೂರ್ಯನಿಗೆ ನಮಸ್ಕರಿಸಬೇಕು. ಹಾಗೆ ತುಳಸಿ ಗಿಡಕ್ಕೂ ಕೂಡ ನಮಸ್ಕರಿಸಬಹುದು.ಇದರಿಂದ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಹಾಗೇ ಅಗ್ನಿ, ಜಲವನ್ನು ನೋಡಿದರೆ ಆ ದಿನ ಒಳ್ಳೆದಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ಏಕೆಂದರೆ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂದು ಪಂಡಿತರು ಹೇಳುತ್ತಾರೆ.

ಏನನ್ನು ನೋಡಬಾರದು :
ಬೆಳಗಿನ ಜಾವ ಹಾಸಿಗೆಯಿಂದ ಎಡ್ಡಾ ಕೂಡಲೇ ಕೂದಲು ಬಿಟ್ಟುಕೊಂಡ ಹೆಂಡತಿ, ಕುಂಕುಮ ಇರದ ಹೆಣ್ಣಿನ ಮುಖ, ಚಪ್ಪಲಿ, ಕಾಗೆ , ಬೆಕ್ಕು, ನಾಯಿ, ಸೇರಿದಂತೆ ಅಪಶಕುನ ಎಂದು ಹೇಳಲಾಗುವ ಇತರೆ ವಸ್ತುಗಳು.

ಏನನ್ನು ನೋಡಬೇಕು :
ಸೂರ್ಯ, ದೇವರುಗಳ ಫೋಟೋ, ನರಿ, ಕುದುರೆ, ಪೊರಕೆ, ತೆಂಗಿನಮರ, ಬಾಳೆ ಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ಮರ, ನೀರು, ಹಸು, ಎತ್ತು ಮುಂತಾದವುಗಳು.

Facebook Comments

Sri Raghav

Admin