ಅಣ್ಣ ಐಪಿಎಸ್ ಅಧಿಕಾರಿ, ತಮ್ಮ ಕುಖ್ಯಾತ ಭಯೋತ್ಪಾದಕ..!

ಈ ಸುದ್ದಿಯನ್ನು ಶೇರ್ ಮಾಡಿ

Terrorist

ಶ್ರೀನಗರ,ಜು.9- ಅಣ್ಣ ಐಪಿಎಸ್ ಅಧಿಕಾರಿಯಾಗಿದ್ದರೆ ,ತಮ್ಮ ಕುಖ್ಯಾತ ಭಯೋತ್ಪಾದಕ.   ಕಳೆದ ಮೇ 22ರಂದು ಕಾಶ್ಮೀರ ವಿಶ್ವವಿದ್ಯಾನಿಲಯದಿಂದ ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಕಣ್ಮರೆಯಾಗಿದ್ದ ಶಾಮ್ ಸುಲ್ ಹಕ್ ಮೆಂಗ್ನೊ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯನ್ನು ಸೇರಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಅನುಮಾನಕ್ಕೆ ಪುಷ್ಠಿ ನೀಡುವಂತೆ ಹಿಜ್ಬುಲ್ ಮುಜಾಯಿದ್ದೀನ್ ನಿನ್ನೆ ಬಿಡುಗಡೆ ಮಾಡಿರುವ ಹೊಸ ಭಯೋತ್ಪಾದಕರ ಪಟ್ಟಿಯಲ್ಲಿ ಈತನ ಹೆಸರಿದೆ. ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಕಮಾಂಡರ್ ಆಗಿ ನೇಮಕಗೊಂಡಿದ್ದಾನೆ.

ಈತನ ಹಿರಿಯ ಸಹೋದರ ಈಶಾನ್ಯ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಹಿಜ್ಬುಲ್ ಮುಜಾಯಿದ್ದೀನ್ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ಎಂಬಾತನನ್ನು ರಕ್ಷಣಾ ಪಡೆಗಳು ಎನ್‍ಕೌಂಟರ್‍ನಲ್ಲಿ ಕೊಂದು ಹಾಕಿದ್ದರು. ಬುರ್ಹಾನ್ ವಾನಿ ಹತ್ಯೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ತನ್ನ ಸಂಘಟನೆಗೆ ಹೊಸದಾಗಿ ಸದಸ್ಯರನ್ನು ನೇಮಕ ಮಾಡಿಕೊಳ್ಳುತ್ತಿದೆ.

ವಿಶೇಷವಾಗಿ 18ರಿಂದ 25 ವರ್ಷದೊಳಗಿನ ಯುವಕರನ್ನೇ ಗುರಿಯಾಗಿಟ್ಟುಕೊಂಡು ಭಯೋತ್ಪಾದಕ ಸಂಘಟನೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೂಲಗಳ ಪ್ರಕಾರ ವಿದ್ಯಾರ್ಥಿಗಳನ್ನೇ ತನ್ನ ಸಂಘಟನೆಯತ್ತ ಸೆಳೆಯುತ್ತಿದೆ. ಶಾಮ್ ಸುಲ್ ಹಕ್ ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಯುನಾನಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ.

ಈತನ ಹಿರಿಯ ಸಹೋದರ ಇನಾಮ್ ಉಲ್ ಹಕ್ 2012ರ ಬಾಚ್‍ನ ಐಪಿಎಸ್ ಅಧಿಕಾರಿ. ಮೇ 22ರಂದು ಶಾಮ್‍ಸುಲ್ ಹಕ್ ಕಾಶ್ಮೀರ ವಿಶ್ವವಿದ್ಯಾನಿಲಯದಿಂದ ಕಾಣೆಯಾಗಿದ್ದಾರೆ ಎಂದು ಆತನ ಪೊೀಷಕರು ಠಾಣೆಗೆ ದೂರು ನೀಡಿದ್ದಾರೆ. ನಿನ್ನೆ ಹಿಜ್ಬುಲ್ ಮುಜಾಯಿದ್ದೀನ್ ವೆಬ್‍ಸೈಟ್‍ನಲ್ಲಿ ಬಿಡುಗಡೆ ಮಾಡಿರುವ ಹೊಸ ಸದಸ್ಯರ ಪಟ್ಟಿಯಲ್ಲಿ ಈತನ ಹೆಸರಿದೆ. ನಾನು 25ರಂದು ಸಂಘಟನೆಗೆ ಸೇರಿಕೊಂಡಿದ್ದೇನೆ. ಪ್ರತ್ಯೇಕ ಕಾಶ್ಮೀರಕ್ಕಾಗಿ ಅಲ್ಲಾಹುನ ನಿರ್ದೇಶನದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾನೆ.

Facebook Comments

Sri Raghav

Admin