ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ರೈತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Tractor--01

ಮಾಗಡಿ, ಜು.10- ಟ್ರ್ಯಾಕ್ಟರ್ ಉರುಳಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹುಲಿಯೂರು ದುರ್ಗ ಹೋಬಳಿಯ ಮುನಿಯಪ್ಪನ ಪಾಳ್ಯದ ಜಯರಾಮಯ್ಯ (55) ಮೃತಪಟ್ಟ ದುರ್ದೈವಿ ರೈತ. ತಾಲ್ಲೂಕಿನ ದಂಡಿಗೆಪುರದ ಬಳಿ ಸಸಿಗಳನ್ನು ನೆಡಲು ಟ್ರ್ಯಾಕ್ಟರ್‍ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.  ಘಟನೆಯಲ್ಲಿ ಕಳಚೇಗೌಡ ಎಂಬುವರ ಕಾಲು ಮುರಿದಿದ್ದು , ಗಂಭೀರ ಗಾಯಗೊಂಡಿದೆ. ಈ ಬಗ್ಗೆ ಮಾಗಡಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin