ವಿಶ್ವ ಕಪ್ ಫುಟ್ಬಾಲ್’ನಲ್ಲಿ ಗಮನ ಸೆಳೆದ ಆಸ್ಟ್ರೇಲಿಯಾದ ಈ ಪುಟ್ಟ ಅಭಿಮಾನಿ..!

ಈ ಸುದ್ದಿಯನ್ನು ಶೇರ್ ಮಾಡಿ

DS

ಈಗ ವಿಶ್ವದೆಲ್ಲೆಡೆ ಫುಟ್ಬಾಲ್ ಪಂದ್ಯಾ ವಳಿಯದ್ದೇ ಸುದ್ದಿ-ಸಮಾಚಾರ. ಕಾಲ್ಚೆಂಡಿನ ಮಹಾ ಸಮರ ನೋಡಲು ವಿವಿಧ ದೇಶಗಳ ಕ್ರೀಡಾ ಪ್ರೇಮಿಗಳು ರಷ್ಯಾದತ್ತ ಧಾವಿಸಿದ್ದಾರೆ. ಈ ಬಾರಿ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾದ ಪುಟ್ಟ ಹೆಣ್ಣು ಶಿಶುವೊಂದು ಗಮನಸೆಳೆದಿದೆ.  ಎಮ್ಮಿ-15 ತಿಂಗಳ ಆಸ್ಟ್ರೇಲಿಯನ್ ಹೆಣ್ಣು ಶಿಶು. ಡೇವಿಡ್ ಕುನ್ ಮತ್ತು ಸಾಂಡ್ರಾ ಎಂಬ ಅಪ್ಪಟ ಫುಟ್ಬಾಲ್ ಅಭಿಮಾನಿ ದಂಪತಿಯ ಮುದ್ದಿನ ಮಗು ಇದು. ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ಪಂದ್ಯಾವಳಿ ನೋಡಲು ಈ ಮಗು ತನ್ನ ತಂದೆ ತಾಯಿ ಜೊತೆ ಆಗಮಿಸಿ ಎಲ್ಲರ ಗಮನ ಸೆಳದಿದೆ.

DS-1

ಆಸ್ಟ್ರೇಲಿಯಾ ಆಟಗಾರರನ್ನು ಬೆಂಬಲಿಸುವಂತೆ ಹಸಿರು ಮತ್ತು ಹಳದಿ ವಸ್ತ್ರ ಧರಿಸಿ ಈ ಮಗು ಕ್ರೀಡಾಂಗಣದಲ್ಲಿ ತನ್ನ ತಂದೆ-ತಾಯಿ ಜೊತೆ ಪಂದ್ಯಗಳನ್ನು ಕುತೂಹಲದಿಂದ ವೀಕ್ಷಿಸುತ್ತದೆ. ಆಸ್ಟ್ರೇಲಿಯದಿಂದ 10,000ಕ್ಕೂ ಹೆಚ್ಚು ಕ್ರೀಡಾಸಕ್ತರು ಈಗ ರಷ್ಯಾದಲ್ಲಿದ್ದು, ಎಮ್ಮಿ ಎಲ್ಲರಿಗಿಂತ ಕಿರಿಯ ಅಭಿಮಾನಿ ಎನಿಸಿದ್ದಾಳೆ.  ಪಂದ್ಯದ ವೇಳೆ ಕೆಲವೊಮ್ಮೆ ಈ ಮಗು ನಿದ್ರಿಸಿ ತಮ್ಮ ತಾಯಿ ಆರಾಮವಾಗಿ ಫುಟ್ಬಾಲ್ ವೀಕ್ಷಿಸಲು ನೆರವಾಗುತ್ತದೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಿವಿಗಡಚಿಕ್ಕುವ ಚಪ್ಪಾಳೆ ಮತ್ತು ಕೇಕೆಗಳಿಗೆ ಎಮ್ಮಿ ಬೆರಗಾಗುತ್ತಾಳೆ.  ಈ ಮಗುವಿನ ಮುಗ್ದತೆ ಮತ್ತು ಕುತೂಹಲವನ್ನು ಇತರ ಕ್ರೀಡಾ ಪ್ರೇಮಿಗಳು ಆಸಕ್ತಿಯಿಂದ ವೀಕ್ಷಿಸುತ್ತಾರೆ.

Facebook Comments

Sri Raghav

Admin