ನಿಮಗೆ ವೀರ್ಯಾಣು ಸಂಖ್ಯೆ ಕೊರತೆಯಿದ್ದರೆ ಇಲ್ಲಿದೆ ಪರಿಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

Sperm--010

ಮಗುವನ್ನು ಒಂಬತ್ತು ತಿಂಗಳುಗಳ ಕಾಲ ಹೊತ್ತು, ಹೇರುವವರು ಹೆಂಗಸರೇ ಇರಬಹುದು, ಹೀಗಾಗಿ ನೀವು ಅವುಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು. ಆದರೆ, ತಂದೆ ಆಗಬೇಕೆಂದಿರುವವರದ್ದು ಕೂಡ ಮಗುವನ್ನು ಪಡೆಯಲು ಅಷ್ಟೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದರೆ ಅವರ ವೀರ್ಯದ ಗುಣಮಟ್ಟವನ್ನು ಅವರು ಕಾಪಾಡಿಕೊಂಡರೆ ಮಾತ್ರ ಸಂತಾನ ಭಾಗ್ಯ ಪ್ರಾಪ್ತಿ ಆಗುವುದು. ಹಾಗಿದ್ದರೆ ಅವರ ವೀರ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಏನೆಲ್ಲಾ ಬದಲಾವಣೆಗಳು ಮಾಡಿಕೊಳ್ಳಬೇಕು? ಕೇವಲ 30 ದಿನದಲ್ಲಿ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲುಕೊಳ್ಳಲು ಈ ಕೆಳಗಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಯಾವುದೇ ಖರ್ಚಿಲ್ಲದೆ ನಿಮ್ಮ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ.

# ಮೊದಲನೆಯದಾಗಿ ಯೋಗ ಮಾಡಿ :
ಒತ್ತಡದ ಬದುಕಿನಲ್ಲಿ ಯೋಗ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಯಾವುದೇ ವೈದ್ಯರು ಹೇಳುವುದು ಇದೇ ಮಾತನ್ನು. ಪ್ರತಿದಿನ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದು. ಯೋಗ ಮಾಡುವುದರಿಂದ ಮತ್ತೊಂದು ಉಪಯೋಗ ಸಂಶೋಧನೆಯಿಂದ ಸಾಬೀತಾಗಿದೆ. ಅದೇನೆಂದು ಕೇಳುತ್ತಿದ್ದೀರಾ? ಹಾಗಾದರೆ ಈ ಸುದ್ದಿಯನ್ನೊಮ್ಮೆ ಓದಿ. ಪ್ರತಿದಿನ ಯೋಗ ಮಾಡುವ ಪುರುಷರಲ್ಲಿ ವೀರ್ಯಾಣುಗಳು ಗುಣಮಟ್ಟ ಹೆಚ್ಚುವುದು ಎಂದು ಏಮ್ಸ್ ನಡೆಸಿದ ಅಧ್ಯಯನವೊಂದರಿಂದ ತಿಳಿದು ಬಂದಿದೆ.

6 ತಿಂಗಳಿನಿಂದ ನಿಯಮಿತವಾಗಿ ಯೋಗ ಅಭ್ಯಾಸ ಮಾಡುತ್ತಿರುವ 200 ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಿದಾಗ ಯೋಗ ಅಭ್ಯಾಸ ಪ್ರಾರಂಭಿಸಿದ 21 ದಿನದಲ್ಲಿಯೇ ಮಾನಸಿಕ ಒತ್ತಡ ಕಡಿಮೆಯಾಗಿ, ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗುತ್ತಿರುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ಮಾನಸಿಕ ಒತ್ತಡದ ಕಾರಣದಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತವೆ, ಇದರಿಂದ ದೇಹಕ್ಕೆ ಅಗತ್ಯವಾದ ಆಮ್ಲಜನಕದ ಪೂರೈಕೆಯಾಗುವುದಿಲ್ಲ, ಇವೆಲ್ಲಾ ವೀರ್ಯಾಣುಗಳ ಸಂಖ್ಯೆ ಕುಂಠಿತಗೊಳಿಸುತ್ತವೆ.  ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು, ಅಲ್ಲದೇ ಪುರುಷರಲ್ಲಿ ಕಾಣಿಸಿಕೊಳ್ಳುತ್ತಿರುವ ಬಂಜೆತನ ಸಮಸ್ಯೆಯೂ ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ.

# ತೂಕವನ್ನು ನಿಯಂತ್ರಣದಲ್ಲಿಡಿ :
ಅತಿ ಕಡಿಮೆ ಅಥವಾ ಅತಿ ಹೆಚ್ಚು ತೂಕ ಹೊಂದುವುದು ವೀರ್ಯದ ಗುಣಮಟ್ಟದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ಅಷ್ಟೇ ಅಲ್ಲದೆ ಇದು ಗಂಡಸಿನ ಲೈಂಗಿಕಾಸಕ್ತಿಯನ್ನು ಮತ್ತು ಸಾಮರ್ಥ್ಯವನ್ನು ಕ್ಷೀಣಿಸಿ ದಂಪತಿಯ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ಸರಿಯಾದ ಆಹಾರಪದ್ಧತಿ ಪಾಲಿಸಬೇಕು ಮತ್ತು ದೈಹಿಕ ವ್ಯಾಯಾಮಗಳನ್ನು ಮಾಡಬೇಕು.

# ಇವುಗಳನ್ನು ಹೆಚ್ಚಾಗಿ ಸೇವಿಸಿ
ಫೋಲಿಕ್ ಆಮ್ಲವು ಕೇವಲ ತಾಯಿ ಆಗಬೇಕೆಂದು ಇರುವವರಿಗೆ ಮಾತ್ರ ಮುಖ್ಯವಲ್ಲ. ಯಾವ ಗಂಡಸರ ಆಹಾರದಲ್ಲಿ ಫೋಲಿಕ್ ಆಮ್ಲವು ಕಡಿಮೆ ಪ್ರಮಾಣದಲ್ಲಿ ಇತ್ತೋ, ಅವರ ವೀರ್ಯದಲ್ಲೇ ಹೆಚ್ಚಾಗಿ ಕ್ರೋಮೋಸೋಮ್ ಅಸಹಜತೆ ಕಂಡು ಬಂದಿದ್ದು ಎಂದು ತಿಳಿಸುತ್ತದೆ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಅಲ್ಲಿ ನಡೆದ ಅಧ್ಯಯನ. ಹೀಗಾಗಿ ಫೋಲೇಟ್ ಹೆಚ್ಚಿರುವಂತಹ ಆಹಾರಗಳಾದ ಬೀನ್ಸ್, ಎಲೆ ತರಕಾರಿಗಳು, ಧಾನ್ಯಗಳು, ಸಿಟ್ರಸ್ ಹಣ್ಣುಗಳನ್ನ ಸೇವಿಸಬೇಕು.

# ಧೂಮಪಾನ ನಿಲ್ಲಿಸಿ :
ಧೂಮಪಾನ ಮಾಡುವುದು ವೀರ್ಯದ ಕೊರತೆಯನ್ನು ಮತ್ತು ಮಂದಗತಿಯಲ್ಲಿ ಚಲಿಸುವ ವೀರ್ಯಕ್ಕೆ ಕಾರಣವಾಗುತ್ತದೆ. ನೀವು ಮಗುವಿಗೆ ಪ್ರಯತ್ನ ಮಾಡುವ ಕನಿಷ್ಠ ಮೂರು ತಿಂಗಳ ಮುಂಚೆ ಆದರೂ ನಿಮ್ಮ ಪತಿಯು ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

#ಮದ್ಯಪಾನ ನಿಲ್ಲಿಸಬೇಕು
ಗಂಡಸರು ಇದನ್ನು ಸಂಪೂರ್ಣವಾಗಿ ತ್ಯಜಿಸಲು ಆಗುವುದೇ ಇಲ್ಲ ಎಂದರೆ, ಕನಿಷ್ಠಪಕ್ಷ ಸೇವನೆಯ ಪ್ರಮಾಣವಾದರೂ ಕಡಿಮೆ ಮಾಡಲೇ ಬೇಕು. ಮದ್ಯಪಾನವು ಕೂಡ ವೀರ್ಯದ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ವೀರ್ಯದಲ್ಲಿ ಅಸಹಜತೆಗಳನ್ನು ಉಂಟುಮಾಡುತ್ತದೆ ಎಂಬುದು ತಿಳಿದು ಬಂದಿದೆ.

# ಕಾಫಿ ಸೇವನೆ ಕಡಿಮೆ ಮಾಡಿ
ತುಂಬಾ ಹೆಚ್ಚು ಸೋಡಾ ಅಥವಾ ಕಾಫಿ ಸೇವನೆ ಮಾಡುವ ಗಂಡಸರಲ್ಲಿ ವೀರ್ಯದ ಸಾಂದ್ರತೆ ಮತ್ತು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಡೆನ್ಮಾರ್ಕ್ ಅಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ದಿನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಕಾಫಿ ಅನ್ನು ಸೇವಿಸಬಾರದು.

# ಒತ್ತಡದಿಂದ ಮುಕ್ತರಾಗಿ
ದೈಹಿಕ ಹಾಗು ಮಾನಸಿಕ ಒತ್ತಡವು ಅಸಹಜ ಮತ್ತು ಕಡಿಮೆ ಸಾಂದ್ರತೆಯ ವೀರ್ಯಕ್ಕೆ ಕಾರಣವಾಗುತ್ತದೆ. ಚೆನ್ನಾಗಿ ತಿನ್ನುವುದು, ಮಲಗುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಕುಟುಂಬ, ಸ್ನೇಹಿತರ ಜೊತೆ ತಿಳಿಸಮಯ ಕಳೆಯುವುದರ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

# ಬಿಸಿನೀರು ಸ್ನಾನ ಬೇಡ
ವೀರ್ಯದ ಉತ್ಪತ್ತಿಯು ಒಂದು ನಿರ್ಧಿಷ್ಟ ತಾಪಮಾನದಲ್ಲಿ ಆಗಬೇಕಿದ್ದು, ನಮ್ಮ ದೇಹದ ಆಂತರಿಕ ತಾಪಮಾನವು ಕೂಡ ಅದಕ್ಕೆ ತುಂಬಾ ಹೆಚ್ಚು ಆಗುತ್ತದೆ. ಹೀಗಾಗಿಯೇ ವೃಷಣಗಳು (ಟೆಸ್ಟಿಕಲ್ಸ್) ಕಡಿಮೆ ತಾಪಮಾನದಲ್ಲಿ ಇರಲೆಂದು ದೇಹದ ಹೊರಗಡೆ ಇರುವುದು. ಹೀಗಾಗಿ ವೃಷಣಗಳ ತಾಪಮಾನ ಹೆಚ್ಚಿಸುವಂತ ಯಾವುದೇ ಕೆಲಸಗಳನ್ನು ನಿಮ್ಮ ಪತಿ ಮಾಡಬಾರದು. ಉಧಾರಣೆಗೆ, ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು, ಸ್ಟೀಮ್/ಸೌನಾ ಅಲ್ಲಿ ಹೆಚ್ಚು ಹೊತ್ತು ಕಳೆಯುವುದು ಮಾಡಬಾರದು.

Facebook Comments

Sri Raghav

Admin