ಬೊಜ್ಜು ಮತ್ತು ತೂಕ ಇಳಿಸಲು ಮೊಟ್ಟೆ ಬೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Egg--01

ಉತ್ತಮ  ಅಂಶಗಳು ಸಣ್ಣ ಪ್ಯಾಕೇಜ್‍ಗಳಲ್ಲಿ ಬರುತ್ತವೆ ಎಂದು ಸದಾ ಹೇಳಲಾಗುತ್ತದೆ, ಮೊಟ್ಟೆಯ ವಿಷಯಕ್ಕೆ ಬಂದರೆ ಇದನ್ನು ಒಪ್ಪಿಕೊಳ್ಳಲೇಬೇಕು. ಪ್ರೋಟೀನ್, ಉತ್ತಮ ಕೊಬ್ಬುಗಳು ಮತ್ತು ಅಗತ್ಯ ವಿಟಮಿನ್‍ಗಳನ್ನು ಹೊಂದಿರುವ ಮೊಟ್ಟೆಗಳು ಅತ್ಯಂತ ಆರೋಗ್ಯ-ಸ್ನೇಹಿ ಗುಣಗಳನ್ನು ಹೊಂದಿವೆ. ಉಪಾಹಾರದಲ್ಲಿ ಮೊಟ್ಟೆ ಸೇವಿಸುವುದು ತೂಕ ಇಳಿಸುವ ಪಥ್ಯಕ್ಕೆ ಪೂರಕವಾಗಿದೆ. ಜಾಗತಿಕವಾಗಿ 2 ಬಿಲಿಯನ್‍ಗೂ ಹೆಚ್ಚು ವಯಸ್ಕರು ಮತ್ತು ಮಕ್ಕಳು ಅತಿಯಾದ ತೂಕ ಅಥವಾ ಬೊಜ್ಜು ಹೊಂದಿದ್ದು ತೂಕದಿಂದಾಗಿ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೊಸ ಅಧ್ಯಯನದ ವರದಿಗಳು ಹೇಳುತ್ತವೆ. ಅಂದರೆ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅತಿಯಾದ ತೂಕ ಹೊಂದಿದ್ದಾರೆ, ನಗರೀಕರಣ, ದುರ್ಬಲ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ಅದಕ್ಕೆ ಪೂರಕವಾಗಿವೆ.

ಭಾರತದಲ್ಲಿ ಕೂಡಾ ಪರಿಸ್ಥಿತಿ ಭಿನ್ನವಾಗಿಲ್ಲ. ದಿನೇ ದಿನೇ ಭಾರತೀಯರು ಕೂಡಾ ಬೊಜ್ಜಿಗೆ ಒಳಗಾಗುತ್ತಿದ್ದಾರೆ. 2025ರ ವೇಳೆಗೆ ಬೊಜ್ಜಿರುವವರ ಸಂಖ್ಯೆ ಶೇ.5ಕ್ಕೆ ಹೆಚ್ಚಲಿದೆ. ಇದು 2016ರಲ್ಲಿ 30 ಮಿಲಿಯನ್ ಬೊಜ್ಜಿನ ಭಾರತೀಯರಿದ್ದರೆ 2025ರ ವೇಳೆಗೆ 70 ಮಿಲಿಯನ್ ಆಗಲಿದ್ದಾರೆ!!
ಭಾರತದಲ್ಲಿ ಬೊಜ್ಜು 21ನೇ ಶತಮಾನದಲ್ಲಿ ಸಾಂಕ್ರಾಮಿಕದ ಪ್ರಮಾಣ ಮುಟ್ಟಿದ್ದು, ಅಸ್ವಸ್ಥತೆಯ ಬೊಜ್ಜು ದೇಶದ ಜನಸಂಖ್ಯೆಯ ಶೇ.5ರಷ್ಟಿದೆ. ಭಾರತ ಸತತವಾಗಿ ಬೊಜ್ಜಿನತ್ತ ವಾಲುತ್ತಿರುವ ಶ್ರೀಮಂತ ರಾಷ್ಟ್ರಗಳ ಪ್ರವೃತ್ತಿಯನ್ನು ಅನುಸರಿಸುತ್ತಿದೆ. ಜಾಗತಿಕ ಆಹಾರ ಮಾರುಕಟ್ಟೆಗಳ ಮುಂದಿವರಿದ ಒಗ್ಗೂಡುವಿಕೆಯಿಂದ ಅನಾರೋಗ್ಯಕರ, ಸಂಸ್ಕರಿತ ಆಹಾರ ಹೆಚ್ಚು ಲಭ್ಯವಾಗುತ್ತಿದೆ. ಇದರೊಂದಿಗೆ ಮಧ್ಯಮ ವರ್ಗದ ಆದಾಯ ಹೆಚ್ಚಾಗುತ್ತಿದ್ದು ಇದು ಮಧ್ಯಮ ವರ್ಗ ಹಾಗೂ ಹೆಚ್ಚಿನ ಆದಾಯದ ವರ್ಗದವರಲ್ಲಿ ಕ್ಯಾಲೊರಿ ಸೇವನೆ ಹೆಚ್ಚಿಸುತ್ತಿದೆ. ಬೊಜ್ಜು ಹೃದಯರೋಗವನ್ನು ತರುವ ಗಂಭೀರ ಸಮಸ್ಯೆಯಾಗಿದೆ.

ನಮ್ಮ ದೇಶದಲ್ಲಿ ಚೀನಾದ ನಂತರ ಅತ್ಯಂತ ಹೆಚ್ಚಿನ ಸಂಖ್ಯೆಯ ಬೊಜ್ಜಿನ ಮಕ್ಕಳಿದ್ದಾರೆ. ಜಡ ಜೀವನಶೈಲಿ ಮತ್ತು ಜಂಕ್ ಫುಡ್ ಇವುಗಳಿಗೆ ಮುಖ್ಯ ಕಾರಣ. ಭಾರತದ ಆಹಾರಗಳು ಕೂಡಾ ಕಾರ್ಬೊಹೈಡ್ರೇಡ್ ಮತ್ತು ಎಣ್ಣೆಯ ಅಂಶ ಹೆಚ್ಚಾಗಿರುತ್ತವೆ. ಭಾರತ ಮತ್ತು ಭಾರತೀಯರು ಒಂದು ರಾಷ್ಟ್ರವಾಗಿ ಬೊಜ್ಜಿನಿಂದ ಉಂಟಾಗುವ ಆರೋಗ್ಯದ ಪರಿಸ್ಥಿತಿಗಳಿಗೆ ಅಂದರೆ ರಕ್ತದೊತ್ತಡ, ಮಧುಮೇಹ(ಭಾರತದಲ್ಲಿ 80 ಮಿಲಿಯನ್ ಮಧುಮೇಹಿಗಳಿದ್ದಾರೆ), ಕೀಲುನೋವು, ಹೃದಯರೋಗ ಮತ್ತು ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತದೆ. ಹೃದಯರೋಗದ ವೆಚ್ಚ, ಮೂತ್ರಪಿಂಡಗಳ ಬದಲಾವಣೆ ಮತ್ತು ಮಧುಮೇಹದ ಚಿಕಿತ್ಸೆಗಳಿಗೆ ಅಪಾರ ವೆಚ್ಚ ಮಾಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ವಿಟಮಿನ್ ಡಿ ಹೊಂದಿರುವ ಮೊಟ್ಟೆಗಳನ್ನು ಸೇವೆಸಿದರೆ ಮೂಳೆಗಳು ಹಾಗೂಹಲ್ಲಿನ ಗಟ್ಟಿಗೊಳ್ಳುವಿಕೆಗೆ ನೆರವಾಗುತ್ತದೆ. ಹಾಗೂ ರಕ್ತದ ಸಕ್ಕರೆ ಮಟ್ಟದ ಸಮತೋಲನ ಮಾಡಲು ನೆರವಾಗುತ್ತವೆ, ಹೃದಯರೋಗದ ವಿರುದ್ಧ ರಕ್ಷಣೆ ನೀಡುತ್ತದೆ ಮತ್ತು ನರಗಳು ಹಾಗೂ ಮೆದುಳಿನ ಆರೋಗ್ಯಕರ ಕಾರ್ಯ ನಿರ್ವಹಣೆಗೆ ಬೆಂಬಲಿಸುತ್ತವೆ. ಅತ್ಯಂತ ಮುಖ್ಯವಾಗಿ ಮೊಟ್ಟೆಗಳು ಅತ್ಯಂತ ಉತ್ತಮ ತೂಕ ಇಳಿಸುವ ಆಹಾರಗಳಾಗಿವೆ ಎಂದು ಪರಿಗಣಿಸಲಾಗಿದೆ.

ಮೊಟ್ಟೆಗಳಲ್ಲಿ ಪ್ರೋಟೀನ್ ಹೆಚ್ಚಾಗಿವೆ ಮತ್ತು ಪ್ರೋಟೀನ್ ತೂಕ ಇಳಿಸಲು ಅತ್ಯಂತ ಮುಖ್ಯವಾಗಿದೆ. ತೂಕ ಇಳಿಸಲು ಮೊಟ್ಟೆಗಳಲ್ಲಿ ಎಗ್ ವ್ಹೈಟ್ ಸಲಾಡ್, ಅಥವಾ ಕ್ವಿಕ್ ಆಮ್ಲೆಟ್‍ಗಳು ಅಥವಾ ಎಗ್ ವ್ಹೈಟ್‍ನಿಂದ ಸ್ಯಾಂಡ್‍ವಿಚ್‍ಗಳನ್ನು ತಯಾರಿಸಬಹುದು. ತೂಕ ಇಳಿಸಬೇಕೆಂದರೆ ಮೊಟ್ಟೆಗಳು ಅತ್ಯುತ್ತಮ ವಿಧಾನವಾಗಿವೆ. ಉಪಹಾರದಲ್ಲಿ ಮೊಟ್ಟೆ ಬಳಸಿದರೆ ಹೊಟ್ಟೆ ತುಂಬಿಸಿ ಮತ್ತಷ್ಟು ತಿನ್ನುವ ಬಯಕೆ ಕಡಿಮೆ ಮಾಡುತ್ತದೆ. ಮೊಟ್ಟೆಗಳು ದೇಹದ ಚಯಾಪಚಯ ಕ್ರಿಯೆ ಉತ್ತೇಜಿಸುತ್ತವೆ, ಜೀರ್ಣವಾಗುವಾಗ ಮೊಟ್ಟೆಯ ಪ್ರೋಟೀನ್‍ಗಳನ್ನು ಸಾಂಪ್ರದಾಯಿಕ ಔಷಧಗಳಂತೆ ರಕ್ತದೊತ್ತಡ ಕಡಿಮೆ ಮಾಡುವ ಪೆಪ್ಟೈಡ್‍ಗಳಾಗಿ ಪರಿವರ್ತಿಸಲಾಗುತ್ತದೆ.

ಕಡಿಮೆ ಕ್ಯಾಲೊರಿಗಳು:
ಮೊಟ್ಟೆಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿವೆ. ಸರಾಸರಿ ಮೂರು ದೊಡ್ಡ ಬೇಯಿಸಿದ ಮೊಟ್ಟೆಗಳು 240 ಕ್ಯಾಲೊರಿಗಳಿಗಿಂತ ಕಡಿಮೆ ಹೊಂದಿರುತ್ತವೆ. ಕಡಿಮೆ ಕ್ಯಾಲೊರಿ ಮತ್ತು ಪೌಷ್ಠಿಕಾಂಶಯುಕ್ತ ತರಕಾರಿಗಳೊಂದಿಗೆ ಸೇವಿಸಿದರೆ ಕೇವಲ 300 ಕ್ಯಾಲೊರಿಗಳ ಪುಷ್ಕಳ ಭೋಜನವಾಗುತ್ತದೆ.
ಹೊಟ್ಟೆ ತುಂಬಿಸುತ್ತವೆ: ಮೊಟ್ಟೆಗಳು ಹೊಟ್ಟೆ ತುಂಬಿಸುತ್ತವೆ ಇದರಿಂದ ನೀವು ಮತ್ತೆ ಮತ್ತೆ ತಿನ್ನಬೇಕಿಲ್ಲ. ಅವು ಸಂಪೂರ್ಣ ಪ್ರೋಟೀನ್‍ಗಳು ಮಹತ್ತರ ಮೂಲವಾಗಿವೆ ಮತ್ತು ಇದು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬಿಸುವ ಸಾಮಥ್ರ್ಯ ಹೊಂದಿವೆ.

ಮೊಟ್ಟೆಗಳು ಅಗ್ಗ ಮತ್ತು ಸಿದ್ಧಪಡಿಸಲು ಸುಲಭ:

ಮೊಟ್ಟೆಗಳನ್ನು ನಿಮ್ಮ ದೈನಂದಿನ ಪಥ್ಯಕ್ಕೆ ಸೇರಿಸುವುದು ಬಹಳ ಸುಲಭ. ಅವು ಅತ್ಯಂತ ಕಡಿಮೆ ವೆಚ್ಚದಲ್ಲಿ ಎಲ್ಲ ಕಡೆ ಲಭ್ಯ ಹಾಗೂ ಕೆಲ ಕ್ಷಣಗಳಲ್ಲಿ ಸಿದ್ಧಪಡಿಸಬಹುದಾಗಿವೆ. ಮೊಟ್ಟೆಗಳು ಹೇಗೆ ಸಿದ್ಧಪಡಿಸಿದರೂ ಬೇಯಿಸಿದರೆ, ಮಿಶ್ರಣ ಮಾಡಿದರೆ, ಆಮ್ಲೆಟ್ ಮಾಡಿದರೆ ಅಥವಾ ಹುರಿದರೂ ಚೆನ್ನಾಗಿರುತ್ತವೆ. ಇನ್ನೇಕೆ ತಡ ಮಾಡುತ್ತೀರಿ? ಎಲ್ಲದಕ್ಕೂ ಒಂದು ಮೊಟ್ಟೆ ಸೇವಿಸಿರಿ ಮತ್ತು ಆರೋಗ್ಯದಿಂದಿರಿ.

Facebook Comments

Sri Raghav

Admin