ನಾಳೆಯಿಂದ ಅ.19ರವರೆಗೆ ಭದ್ರ ಜಲಾಶಯದಿಂದ ನಾಲೆಗೆ ನೀರು ಹರಿಸಲು ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Bhadra--01

ದಾವಣಗೆರೆ,ಜು.11- ಭದ್ರ ಜಲಾಶಯದಿಂದ ಮುಂಗಾರು ಹಂಗಾಮಿಗೆ ನಿರೀಕ್ಷೆಯಂತೆ ನಾಳೆಯಿಂದ ಅಕ್ಟೋಬರ್ 19ರವರೆಗೆ ಸತತವಾಗಿ 100 ದಿನ ನಾಲೆಯಲ್ಲಿ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಭದ್ರ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಮಂಡಲದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು , ನಿನ್ನೆ ಬೆಂಗಳೂರಿನಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭದ್ರ ಅಚ್ಚುಕಟ್ಟು ಪ್ರದೇಶಗಳ ಶಾಸಕರ ಸಭೆಯಲ್ಲಿ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ಬಲದಂಡೆ ನಾಲೆಗೆ 120 ದಿನ ಸತತವಾಗಿ ನೀರು ಹರಿಸುವಂತೆ ನಾನು ಮತ್ತು ಜಿಪಂ ಸದಸ್ಯ ತೇಜಸ್ವಿ ಪಟೇಲ್ ಅವರು ಒತ್ತಯಿಸಿದಾಗ ಸಚಿವ ಡಿ.ಕೆ.ಶಿವಕುಮಾರ್ ಅವರು ಮುಂದಿನ ಸಭೆಯಲ್ಲಿ ನೀರು ಹರಿಸುವ ಬಗ್ಗೆ ಚರ್ಚಿಸೋಣ. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಡಿಕೆಶಿ ಹೇಳಿದ್ದಾರೆ ಎಂದು ದ್ಯಾವಪ್ಪ ತಿಳಿಸಿದರು.  ಭದ್ರ ಜಲಾಶಯಕ್ಕೆ ಅನೇಕ ವರ್ಷಗಳ ನಂತರ ಜುಲೈ ತಿಂಗಳ ಆರಂಭದಲ್ಲಿ ಇಷ್ಟೊಂದು ಪ್ರಮಾಣದ ನೀರು ಹರಿದು ಬಂದಿರುವುದಕ್ಕೆ ಸಭೆಯಲ್ಲಿ ಸೇರಿದ್ದ ಶಾಸಕರು, ಸಚಿವರು ಹರ್ಷ ವ್ಯಕ್ತಪಡಿಸಿದ ಈಗೆ ಮಳೆಯಾದರೆ ಈ ತಿಂಗಳೇ ಜಲಾಶಯ ಭರ್ತಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ.ಶ್ಯಾಮನೂರು ಶಿವಶಂಕರಪ್ಪ , ಎಸ್.ಎ.ರವೀಂದ್ರನಾಥ್, ಕರುಣಾಕರ ರೆಡ್ಡಿ , ರೇಣುಕಾಚರ್ಯ, ಎಸ್.ರಾಮಪ್ಪ, ಮಾಡಾಳ ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ , ಪ್ರೊ.ಲಿಂಗಣ್ಣ ಭದ್ರಾವತಿಯ ಸಂಗಮೇಶ್ವರ್ ತರೀಕೆರೆಯ ಸುರೇಶ್, ರೈತ ಸಂಘದ ಆರ್.ಎಚ್.ಬಸವರಾಜಪ್ಪ , ಕೆ.ಪಿ.ಗಂಗಾಧರಪ್ಪ , ಭದ್ರ ಜಲಾಶಯದ ಅಧೀಕ್ಷಕ ಅಭಿಯಂತರ ದಿವಕರ್ ನಾಯಕ, ಮಾಜಿ ಇಂಜಿನಿಯರ್ ಕುಲಕರ್ಣಿ, ಮಲ್ಲೇಬೆನ್ನೂರು ಪ್ರಚಾರ್ಯ ಎಇಇ ಗವಿಸಿದ್ದೇಶ್, ದಾವಣಗೆರೆ ಇಇ ಕೊಟ್ರೇಶಪ್ಪ , ಭದ್ರಾವತಿ ಇಇ ವೆಂಕಟೇಶಪ್ಪ ಸೇರಿದಂತೆ ಮತ್ತಿತರರು ಇದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin