ಸಿಡಿಲು ಬಡಿದು ಸಾವನ್ನಪ್ಪಿದ್ದ ರೈತನ ಪತ್ನಿಗೆ 5.30 ಲಕ್ಷ ರೂ. ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Check--01
ಅರಸೀಕೆರೆ, ಜು.11- ತಾಲೂಕಿನ ತಳೂರು ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಸಾವಿಗೀಡಾಗಿದ್ದ ರೈತ ಹುಚ್ಚಯ್ಯ ಅವರ ಪತ್ನಿ ಮಣಿ ಅವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆ ಅಡಿ ಶಾಸಕ ಕೆ.ಎಂ. ಶಿವಲಿಂಗೇಗೌಡ 5.30 ಲಕ್ಷ ರೂ. ಚೆಕ್‍ನ್ನು ವಿತರಿಸಿದರು. ಮೃತ ಹುಚ್ಚಯ್ಯ ಜಮೀನಿನಲ್ಲಿ ದನಗಳನ್ನು ಮೇಯಿಸಿಕೊಂಡು ವಾಪಸ್ಸು ಬರುತ್ತಿದ್ದ ವೇಳೆಯಲ್ಲಿ ಮಳೆ ಬಂದಿದ್ದರಿಂದ ಆಶ್ರಯಕ್ಕಾಗಿ ಮರದ ಬಳಿ ನಿಂತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಹುಚ್ಚಯ್ಯ ಹಾಗೂ ಆತನ ಒಂದು ಹಸು ಸ್ಥಳದಲ್ಲೇ ಮರಣ ಹೊಂದಿದ್ದು ಮೃತ ಹುಚ್ಚಯ್ಯನಿಗೆ 5ಲಕ್ಷ ಹಾಗೂ ಹಸುವಿಗೆ 30ಸಾವಿರ ಒಟ್ಟು 5.30 ಲಕ್ಷ ರೂ.ಗಳ ಪರಿಹರ ದೊರೆತಿದ್ದು ಶಾಸಕರ ಕಚೇರಿಯಲ್ಲಿ ಫಲಾನುಭವಿ ಮಣಿಯವರಿಗೆ ವಿತರಿಸಲಾಯಿತು.
ಗ್ರೇಡ್ 2ತಹಸೀಲ್ದಾರ್ ಪಾಲಾಕ್ಷ , ತಳೂರು ಗ್ರಾ.ಪಂ ಅಧ್ಯಕ್ಷ ಲೋಕೇಶ್, ರಾಜಶ್ವ ನಿರೀಕ್ಷಕ ಮಂಜುನಾಥ್, ತಾ.ಪಂ ಮಾಜಿ ಅಧ್ಯಕ್ಷ ಹೆಚ್.ಟಿ ಶಿವಮೂರ್ತಿ ಹಾಗೂ ಗಿರೀಶ್ ಇನ್ನಿತರರು ಇದ್ದರು.

Facebook Comments

Sri Raghav

Admin