ಅಮರನಾಥ ಯಾತ್ರೆಗೆ ಹೊರಟ 11ನೇ ಬ್ಯಾಚ್‍ನ 4956 ಯಾತ್ರಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Amarnath--02
ಜಮ್ಮು, ಜು.11- ಬಿಗಿ ಭದ್ರತೆ ನಡುವೆ 11ನೆ ಬ್ಯಾಚ್‍ನ 4956 ಯಾತ್ರಾರ್ಥಿಗಳು ಇಂದು ಪವಿತ್ರ ಅಮರನಾಥ ಯಾತ್ರೆ ಪುನರಾರಂಭಿಸಿದರು.161 ವಾಹನಗಳಲ್ಲಿ ಆಗಮಿಸಿದ್ದ 97 ಸಾಧುಗಳು, 1454 ಮಹಿಳೆಯರು ಸೇರಿದಂತೆ 4956 ಯಾತ್ರಾರ್ಥಿಗಳನ್ನೊಳಗೊಂಡ ಭಕ್ತರ ತಂಡ ಭಾಗವತಿ ನಗರದಿಂದ ಯಾತ್ರೆ ಆರಂಭಿಸಿದರು.

ಕಳೆದ ಜೂ.28ರಂದು ಆರಂಭಗೊಂಡಿರುವ ಪವಿತ್ರ ಅಮರನಾಥ ಯಾತ್ರೆ ಶ್ರಾವಣ ಪೂರ್ಣಿಮೆಯ ರಕ್ಷಾ ಬಂಧನದ ದಿನದಂದು ಅಂತ್ಯಗೊಳ್ಳಲಿದೆ. ಹೀಗಾಗಿ ದೇಶದ ನಾನಾ ಮೂಲೆಗಳಿಂದ ಸಾವಿರಾರು ಭಕ್ತರು ಹಿಮಾಲಯದ ತುತ್ತ ತುದಿಯಲ್ಲಿರುವ ಗುಹೆಯಲ್ಲಿ ಹಿಮದಲ್ಲಿ ಮೂಡುವ ಶಿವನ ದರ್ಶನ ಪಡೆದು ಪುನೀತರಾಗಲು ಕಾತರಿಸುತ್ತಾರೆ.

ಹವಾಮಾನ ವೈಪರೀತ್ಯ, ಭಯೋತ್ಪಾದಕರ ಭೀತಿಗೂ ಹೆದರದೆ ಶಿವನ ದರ್ಶನ ಪಡೆಯಲು ಯಾತ್ರಿಕರು ಹರಸಾಹಸ ಪಡುತ್ತಾರೆ. ಇತ್ತೀಚೆಗೆ ಹಿಮಾಲಯದ ತಪ್ಪಲಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೆಲ ದಿನಗಳ ಕಾಲ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದ್ದರೂ ಯಾತ್ರಾರ್ಥಿಗಳ ಆಗಮನದ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ. ಶಿವನ ದರ್ಶನಕ್ಕೆ ಬರುವ ಭಕ್ತಾದಿಗಳು ಯಾತ್ರೆ ಕೈಗೊಳ್ಳಲು ಅನುಕೂಲವಾಗುವಂತೆ ಜಮ್ಮು-ಕಾಶ್ಮೀರ ಆಡಳಿತ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

Facebook Comments

Sri Raghav

Admin