‘ಚಾಣಕ್ಯ’ನಾದ ಅಜಯ್ ದೇವಗನ್

ಈ ಸುದ್ದಿಯನ್ನು ಶೇರ್ ಮಾಡಿ

Chanakya--01

ಮುಂಬೈ, ಜು.11- ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಚಾಣಕ್ಯ ಕುರಿತ ಬಾಲಿವುಡ್ ಚಿತ್ರ ನಿರ್ಮಾಣವಾಗುತ್ತಿದ್ದು, ಅಜಯ್ ದೇವಗನ್ ಅವರು ಚಾಣಕ್ಯನ ಪಾತ್ರ ನಿರ್ವಹಿಸಲಿದ್ದಾರೆ. ಚಾಣಕ್ಯ ಕುರಿತ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶನ ಮಾಡುತ್ತಿದ್ದು, ಚಾಣಕ್ಯನ ಪಾತ್ರಕ್ಕೆ 49 ವರ್ಷದ ಅಜಯ್ ದೇವಗನ್ ಆಯ್ಕೆಯಾಗಿದ್ದಾರೆ.

ನೀರಜ್ ಪಾಂಡೆ ಅವರ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನಾನು ಅಭಿನಯಿಸುತ್ತಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಚಾಣಕ್ಯ ಅವರ ಪಾತ್ರ ನಿರ್ವಹಿಸಲು ಕಾತುರನಾಗಿದ್ದೇನೆ ಎನ್ನುತ್ತಾರೆ ದೇವಗನ್.   ಚಾಣಕ್ಯನ ಕುರಿತ ಚಿತ್ರ ನಿರ್ದೇಶಿಸಬೇಕೆಂದು ನಾನು ಹಲವಾರು ದಿನಗಳಿಂದ ಕಾಯುತ್ತಿದ್ದೆ. ಚಾಣಕ್ಯನ ರಾಜಧರ್ಮವನ್ನು ಚಿತ್ರಕಥೆಯನ್ನಾಗಿಟ್ಟುಕೊಂಡು ಸಿನಿಮಾ ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗುವುದು ಗ್ಯಾರಂಟಿ ಎನ್ನುತ್ತಾರೆ ನಿರ್ದೇಶಕ ನೀರಜ್ ಪಾಂಡೆ.

Facebook Comments

Sri Raghav

Admin