ಚಿನ್ನ, ಬೆಳ್ಳಿ ಕೊಳ್ಳಬೇಕು ಎಂದುಕೊಂಡವರಿಗೊಂದು ಸಿಹಿಸುದ್ದಿ ..!

ಈ ಸುದ್ದಿಯನ್ನು ಶೇರ್ ಮಾಡಿ

Gold-01
ಮುಂಬೈ. ಜು. 11 : ಚಿನ್ನ, ಬೆಳ್ಳಿ ಕೊಳ್ಳಲು ಕಾದು ಕೂತವರಿಗೊಂದು ಸಿಹಿಸುದ್ದಿ. ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ತಲಾ 10 ಗ್ರಾಂಗೆ ರೂ. 280 ಇಳಿಕೆ ಕಂಡಿದ್ದು. ಬೆಳ್ಳಿ ತಲಾ 10 ಗ್ರಾಂಗೆ ಬೆಲೆ ಕೆ.ಜಿಗೆ ರೂ. 555 ರಂತೆ ಕಡಿಮೆಯಾಯಿತು. ಏರುಗತಿಯಲ್ಲೇ ಇದ್ದ ಚಿನ್ನದಬೆಲೆಯಲ್ಲಿ ಕೊಂಚ ಇಳಿಮುಖ ಖಂಡಿದ್ದು ಚಿನ್ನ ಬೆಳ್ಳಿ ಕೊಳ್ಳಲು ಇದೆ ಸರಿಯಾದ ಸಮಯ ಎನ್ನಲಾಗಿದೆ. ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 28673 ಇದ್ದಾರೆ, ಚುದ್ಧ ಚಿನ್ನದ ಬೆಲೆ 30,143 ರೂ. ಇದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಕೂಡ ಇಳಿಕೆಯಾಗಿದ್ದು ಬೆಂಗಳೂರಲ್ಲಿ ಪ್ರತಿ ಕೆಜಿಗೆ 39,793 ಇದೆ. ಜಾಗತಿಕ ಪೇಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಮತ್ತು ಸ್ಥಳೀಯ ಚಿನ್ನಾಭರಣ ವರ್ತಕರಿಂದ ಬೇಡಿಕೆ ಕಡಿಮೆ ಆಗಿದ್ದರಿಂದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದೆ ಬೆಲೆ ಮತ್ತಷು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈಗಲೇ ಚಿನ್ನ ಕೊಳ್ಳುವುದು ಉತ್ತಮ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

Facebook Comments

Sri Raghav

Admin