ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿದರೆ ಸಚಿವರಿಗೆ ಚಿನ್ನದುಂಗುರ, ಮೆರವಣಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

Govind-Karajola-Session
ಬೆಂಗಳೂರು, ಜು.11-ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇ ಆದರೆ ತೋಟಗಾರಿಕೆ ಸಚಿವ ಮನಗೂಳಿ ಅವರಿಗೆ ರೇಷ್ಮೆ ರುಮಾಲು ತೊಡಿಸಿ, ಬಂಗಾರದ ಉಂಗುರ ಹಾಕಿ ಮೆರವಣಿಗೆ ಮಾಡುವುದಾಗಿ ಬಿಜೆಪಿ ಶಾಸಕ ಗೋವಿಂದ ಕಾರಜೋಳ ತಿಳಿಸಿದರು.  ಪ್ರಸಕ್ತ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಗುತ್ತಿ ಬಸವಣ್ಣ ಏತನೀರಾವರಿ ಯೋಜನೆ ಪೂರ್ಣಗೊಳ್ಳುವವರೆಗೂ ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದ್ದೀರಿ. ಮಾಜಿ ಪ್ರಧಾನಿ ದೇವೇಗೌಡರೇ ಬಂದು ನಿಮ್ಮ ಮನವೊಲಿಸಬೇಕಾಯಿತು. ನೀವು ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಆಪ್ತರಾಗಿದ್ದೀರಿ. ಒಂದು ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ (ಸಚಿವರನ್ನುದ್ದೇಶಿಸಿ) ಮಾವ ನಿಂಗೆ ರೇಷ್ಮೆ ರುಮಾಲು ತೊಡಿಸಿ, ಬಂಗಾರ ದ ಉಂಗುರ ಹಾಕಿ ಸಿದ್ದೇಶ್ವರ ಗುಡಿಯಿಂದ ಸಿಂಧಗಿಯವರೆಗೂ ಚಕ್ಕಡಿಯಲ್ಲಿ ಮೆರವಣಿಗೆ ಮಾಡಿಸುವುದಾಗಿ ಹೇಳಿದರು.

Facebook Comments

Sri Raghav

Admin