ತುಂಬಿ ಹರಿದ ಕಬಿನಿ ಡ್ಯಾಮ್, ಕೆಆರ್ ಎಸ್ ಭರ್ತಿಗೆ 9 ಅಡಿ ಬಾಕಿ

ಈ ಸುದ್ದಿಯನ್ನು ಶೇರ್ ಮಾಡಿ

Kabini-Dam--01
ಮೈಸೂರು,ಜು.11- ಕೇರಳದ ವೈನಾಡು ಪ್ರದೇಶದಲ್ಲಿ ಅತಿಹೆಚ್ಚು ಮಳೆ ಬೀಳುತ್ತಿರವುದರಿಂದ ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಇರುವ ಕಬಿನಿ ಜಲಾಶಯ ತುಂಬಿ ಹರಿದಿದೆ. ಕಬಿನಿಯಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಎಚ್.ಡಿ.ಕೋಟೆ, ನಂಜನಗೂಡು, ಟಿ.ನರಸೀಪುರದಲ್ಲಿ ಕಪಿಲಾ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿರವುದರಿಂದ ಈ ಭಾಗದ ಜನ ಎಚ್ಚರಿಕೆಯಿಂದ ಇರಬೇಕು, ನದಿ ಪಾತ್ರಗಳಿಗೆ ಹೋಗಬಾರದೆಂದು ನೀರಾವರಿ ಅಧಿಕಾರಿಗಳು ಸೂಚಿಸಿದ್ದಾರೆ.

ಕೆಆರ್‍ಎಸ್ ಭರ್ತಿಗೆ 9 ಅಡಿ ಬಾಕಿ:
ಕೊಡುಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್‍ಗೆ ಅತಿಹೆಚ್ಚು ನೀರು ಹರಿದುಬರುತ್ತಿದೆ. ಕೆಆರ್‍ಎಸ್ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು. ಇಂದು ಬೆಳಗ್ಗೆ ಅಣೆಕಟ್ಟೆಯಲ್ಲಿ 115 ಅಡಿ ನೀರು ಸಂಗ್ರಹವಾಗಿದೆ. ಒಳಹರಿವು 37750 ಕ್ಯೂಸೆಕ್ ಇದ್ದರೆ 35 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್‍ಎಸ್ ಭರ್ತಿಯಾಗಲು ಕೇವಲ 9 ಅಡಿ ಮಾತ್ರ ಬಾಕಿ ಇದೆ. ಕೊಡಗಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಅಣೆಕಟ್ಟೆ ಭರ್ತಿಯಾಗಲಿದೆ.

Facebook Comments

Sri Raghav

Admin