ಈಕೆಯ ಗುಪ್ತಾಂಗದೊಳಗಿತ್ತು 12ಗ್ರಾಂ ಕೊಕೇನ್..!

ಈ ಸುದ್ದಿಯನ್ನು ಶೇರ್ ಮಾಡಿ

Women--001

ಕೋಲ್ಕತ್ತಾ, ಜು.11- ಗುಪ್ತಾಂಗದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯನ್ ಮಹಿಳೆಯೊಬ್ಬರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. 30 ವರ್ಷದ ಡೇವಿಡ್ ಬ್ಲೆಸ್ಸಿಂಗ್ ಎಂಬ ನೈಜೀರಿಯನ್ ಮಹಿಳೆ ತನ್ನ ಗುಪ್ತಾಂಗದಲ್ಲಿ 12 ಗ್ರಾಂ ಕೊಕೇನ್ ಮಾದಕ ದ್ರವ್ಯ ಸಾಗಿಸುತ್ತಿದ್ದಾಗ ಸೆರೆಹಿಡಿಯಲಾಯಿತು ಎಂದು ನೇತಾಜಿ ಸುಭಾಷ್‍ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯನ್ನು ವಶಕ್ಕೆ ಪಡೆದಾಗ ಆಕೆಯ ಬ್ಯಾಗ್‍ನಲ್ಲಿ 20 ಬ್ಲಾಟ್ ಡ್ರಗ್ಸ್ ಇರುವುದು ಪತ್ತೆಯಾಯಿತು. ನಂತರ ಆಕೆಯನ್ನು ಕರೆದೊಯ್ದು ಕೂಲಂಕುಶವಾಗಿ ಪರಿಶೀಲಿಸಿದಾಗ ಗುಪ್ತಾಂಗದಲ್ಲೂ ಡ್ರಗ್ಸ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಮಾತ್ರವಲ್ಲದೆ, ಈಕೆ ಡ್ರಗ್ಸ್ ಮಾತ್ರೆಗಳನ್ನು ತನ್ನ ದೇಹದಲ್ಲಿ ಇಟ್ಟುಕೊಂಡಿದ್ದೇನೆ. ಅದನ್ನು ಹೊರತೆಗೆಯಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.

ತಕ್ಷಣ ನೈಜೀರಿಯನ್ ಮಹಿಳೆಯನ್ನು ಸಮೀಪದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಎಕ್ಸ್‍ರೇ ತೆಗೆಸಿದಾಗ ಆಕೆಯ ಕೆಳಹೊಟ್ಟೆಯಲ್ಲಿ ಡ್ರಗ್ಸ್ ಒಳಗೊಂಡ ಕ್ಯಾಪ್ಸೂಲ್‍ಗಳು ಪತ್ತೆಯಾಗಿವೆ ಎಂದು ಮಾದಕ ದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಮಹಿಳೆಯನ್ನು ಬರಸಾತ್‍ನಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin