ಪಾಕ್’ನಲ್ಲಿ ಚುನಾವಣಾ ರ‍್ಯಾಲಿ ವೇಳೆ ಆತ್ಮಹತ್ಯಾ ಬಾಂಬ್ ದಾಳಿ, 21 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Pakistan--1

ಪೇಷಾವರ್, ಜು.11- ಪಾಕಿಸ್ತಾನದಲ್ಲಿ ಚುನಾವಣಾ ರ್ಯಾಲಿ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹವಾಮಿ ನ್ಯಾಷನಲ್ ಪಕ್ಷದ ಮುಖಂಡ ಸೇರಿದಂತೆ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ತಿಂಗಳ 25ರಂದು ನಡೆಯಲಿರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ನಡೆಸುತ್ತಿರುವ ಚುನಾವಣಾ ರ್ಯಾಲಿಗಳ ಮೇಲೆ ಭಯೋತ್ಪಾದಕರ ಕಣ್ಣು ಬಿದ್ದಿದೆ.

ನಿನ್ನೆ ಮಧ್ಯರಾತ್ರಿ ಎಎನ್‍ಪಿ ಮುಖಂಡ ಹರೂನ್ ಬಿಲೋರ್ ಮತ್ತಿತರ ಕಾರ್ಯಕರ್ತರು ಎಕಾಟೂಟ್ ಪ್ರದೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಈ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಭೀಕರ ದಾಳಿಯಲ್ಲಿ ಎಎನ್‍ಪಿ ಮುಖಂಡ ಬಷೀರ್ ಬಿಲೋರ್ ಅವರ ಪುತ್ರ ಸೇರಿದಂತೆ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  2012ರಲ್ಲಿ ಪೇಷಾವರದಲ್ಲಿ ನಡೆದಿದ್ದ ತಾಲಿಬಾನ್ ದಾಳಿಯಲ್ಲಿ ಬಷೀರ್ ಬಿಲೋರ್ ಅವರು ಮೃತಪಟ್ಟಿದ್ದು, ಇದೀಗ ಅವರ ಪುತ್ರ ಕೂಡ ತಂದೆಯಂತೆಯೇ ಉಗ್ರರ ದಾಳಿಗೆ ಬಲಿಯಾಗಿರುವುದು ದುರ್ದೈವವೇ ಸರಿ.

Facebook Comments

Sri Raghav

Admin