ಸುನೀಲ್‍ ಗವಾಸ್ಕರ್’ಗೆ 69ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Sunil-gousker-Birthday
ಮುಂಬೈ, ಜು.11- ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಟಗಾರ, ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಇಂದು ತಮ್ಮ 69ನೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಸುನೀಲ್‍ಗವಾಸ್ಕರ್’ರ ಹುಟ್ಟುಹಬ್ಬದ ಅಂಗವಾಗಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್‍ಲಕ್ಷ್ಮಣ್, ಮೊಹಮ್ಮದ್‍ಕೇಫ್ ಅಲ್ಲದೆ ರಾಜಕೀಯ ಮುಖಂಡರು ಕೂಡ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಸತತ 100 ಟೆಸ್ಟ್ ಪಂದ್ಯಗಳು ಹಾಗೂ 10 ಸಾವಿರ ರನ್‍ಗಳನ್ನು ಪೂರೈಸಿದ ಮೊದಲ ಕ್ರಿಕೆಟಿಗ ಎಂದು ಬಿಂಬಿಸಿಕೊಂಡಿರುವ ಸುನೀಲ್ ಗವಾಸ್ಕರ್ ಅವರು ಹಲವು ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ತುಂಬಿದ್ದಾರೆ.

Facebook Comments

Sri Raghav

Admin