ಕೊಳಚೆ ಪ್ರದೇಶ ಮಾಯ, ಸಿಕ್ಕಿತು ಸುಸಜ್ಜಿತ ಅಪಾರ್ಟ್‍ಮೆಂಟ್’ನಲ್ಲಿ ಸೂರು..!

ಈ ಸುದ್ದಿಯನ್ನು ಶೇರ್ ಮಾಡಿ

Aswath-Narayan

ಬೆಂಗಳೂರು, ಜು.11- ಇಚ್ಛಾ ಶಕ್ತಿಯಿದ್ದರೆ ಜನರ ಸೇವೆಯನ್ನು ಹೇಗೆ ಮಾಡಬಹುದು ಎಂಬುದಕ್ಕೆ ಕೊಳಚೆ ಪ್ರದೇಶವೊಂದು ಈಗ ಸುಸಜ್ಜಿತ ಅಪಾರ್ಟ್‍ಮೆಂಟ್ ಆಗಿ ಬದಲಾಗಿರುವ ನಿದರ್ಶನವೊಂದು ಯಶವಂತಪುರ ವಾರ್ಡ್‍ನಲ್ಲಿ ಕಣ್ಮುಂದೆ ಕಾಣಿಸುತ್ತಿದೆ. ಯಶವಂತಪುರ ವೃತ್ತದ ಸಮೀಪವೇ ಕರಿಮಂಡಿ ಸ್ಲಂ ಪ್ರದೇಶದಲ್ಲಿ ಇದ್ದಂತಹ ಜೋಪಡಿಗಳನ್ನು ತೆರವುಗೊಳಿಸಿ ಅದೇ ಪ್ರದೇಶದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಹಣ ವಿನಿಯೋಗಿಸಿ ಪಾಲಿಕೆ ಸಹಯೋಗದೊಂದಿಗೆ ನಾಲ್ಕು ಅಂತಸ್ತುಗಳ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದ್ದು , ಅಲ್ಲಿ 36 ಕುಟುಂಬಗಳಿಗೆ ಸೂರು ಒದಗಿಸಲಾಗಿದೆ.

ಕಳೆದ 2016ರ ಏಪ್ರಿಲ್‍ನಲ್ಲಿ ಇಲ್ಲಿನ ನಿವಾಸಿಗಳಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಪಾಲಿಕೆ ಸದಸ್ಯ ಜೈಪಾಲ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ಯಾವುದೇ ಅಡೆತಡೆ ಗಳಿಲ್ಲದೆ ಸ್ವಂತ ಮನೆಯಂತೆ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು , ಎಲ್ಲರನ್ನು ಆಶ್ಚರ್ಯಚಕಿತಗೊಳ್ಳುವಂತೆ ಮಾಡಿದೆ. ಜೋಪಡಿಗಳಲ್ಲಿ ಮಳೆ-ಗಾಳಿ ಎನ್ನದೆ ದಿನಗೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದೆವು. ಈಗ ನಮಗೆ ಸ್ವರ್ಗ ಸುಖದ ಅನುಭವವಾಗುತ್ತಿದೆ ಎಂದು ಫಲಾನುಭವಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಈಗಾಗಲೇ ಇಲ್ಲಿದ್ದ 36 ಕುಟುಂಬಗಳಿಗೆ ಮನೆ ಹಂಚಲಾಗಿದ್ದು , ಕಾರ್ಯಕ್ರಮಗಳಿಗೆ ಸಮುದಾಯ ಭವನ, ದೇವಾಲಯ, ಅಂಗನವಾಡಿ ಸಹ ಈ ವಸತಿ ಸಮುಚ್ಚಯದ ಆವರಣದಲ್ಲಿ ಇದೆ.

Facebook Comments

Sri Raghav

Admin