ಗಾಲ್ಫ್ ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್ ಪ್ರಶಸ್ತಿ ಮೊತ್ತ 350000 ಡಾಲರ್’ಗೆ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

golf-tech
ಬೆಂಗಳೂರು, ಜು.11-ಕಳೆದ ವರ್ಷದ ಉದ್ಘಾಟನಾ ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ 350000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೆಚ್ಚಳದೊಂದಿಗೆ ಮತ್ತೆ ಪ್ರಸಕ್ತ ವರ್ಷ ಆಗಸ್ಟ್ 9ರಿಂದ 12ರವರೆಗೆ ಬೆಂಗಳೂರಿನ ಕರ್ನಾಟಕ ಗಾಲ್ಫ್ ಸಂಸ್ಥೆಯಲ್ಲಿ ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್ ನಡೆಯಲಿದೆ.

ಏಷ್ಯನ್ ಟೂರ್‍ನ ಅತ್ಯಾಕರ್ಷಕ ಮತ್ತು ಇಂಡಿಯನ್ ಗಾಲ್ಫ್‍ನ ಪ್ರತಿಭಾನ್ವಿತ ಗಾಲ್ಫರ್‍ಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಆರು ಬಾರಿಯ ಏಷ್ಯನ್ ಟೂರ್ ಮತ್ತು ನಾಲ್ಕು ಬಾರಿಯ ಯುರೋಪಿಯನ್ ಟೂರ್ ವಿಜೇತ ಎಸ್‍ಎಸ್‍ಪಿ ಚವ್ರಾಸಿಯಾ, ಖಾಲಿನ್ ಜೋಶಿಯೊಂದಿಗೆ ಟೇಕ್ ರಾಯಭಾರಿಯಾಗಿದ್ದಾರೆ, ಏಷ್ಯನ್ ಟೂರ್‍ನ ಪ್ರತಿಭಾನ್ವಿತ ಸ್ಟಾರ್‍ಗಳೊಂದಿಗೆ ಭಾರತದ ಅಸಾಧಾರಣ ಪ್ರತಿಭೆಗಳು, ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್‍ನಲ್ಲಿ ಪಾಲ್ಗೊಳ್ಳಲು ಸಜ್ಜುಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಟೇಕ್ ಸಲ್ಯೂಷನ್ಸ್‍ನ ಉಪ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಎಚ್.ಆರ್, ಅಂತಾರಾಷ್ಟ್ರೀಯ ಅವಕಾಶಗಳನ್ನು ಪಡೆದುಕೊಳ್ಳಲು ಭಾರತದ ಗಾಲ್ಫ್‍ನ ಪ್ರತಿಭೆಗಳನ್ನು ಪ್ರೋ ತ್ಸಾಹಿಸಲು ನಾವು ಎಲ್ಲಾ ಅವಕಾಶಗಳನ್ನು ಪಡೆಯಲು ಬದ್ಧವಾಗಿದ್ದೇವೆ ಮತ್ತು ಇಂಥ ಸಾಧನೆ ಮಾಡಲು ಟೇಕ್ ಸಲ್ಯೂಷನ್ಸ್ ಅತ್ಯಾದ್ಭುತ ಮಾರ್ಗವಾಗಿದೆ ಎಂದಿದ್ದಾರೆ.

ಪಿಜಿಟಿಐನ ಮುಖ್ಯ ಸಿಇಒ ಉತ್ತಮ್ ಸಿಂಗ್ ಮುಂಡೆ, ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್ ನಮ್ಮ ಭಾರತದ ಆಟಗಾರರಿಗೆ ಏಷ್ಯದ ಅತ್ಯುತ್ತಮ ಮತ್ತು ಅನಭವಿಗಳೊಂದಿಗೆ ಸ್ಪರ್ಧಿಸುವ ಉತ್ತಮ ಅವಕಾಶ ಕಲ್ಪಿಸಿದೆ. ನಿಜವಾಗಿಯೂ ಇದು ವಿಶ್ವ ದರ್ಜೆಯ ಟೂರ್ನಿಯಾಗಿದ್ದು, ದೇಶದ ಶ್ರೇಷ್ಠ ಗಾಲ್ಫ್ ಟೂರ್ನಿಗಳಲ್ಲಿ ಇದು ಸಹ ಒಂದಾಗಿದೆ, ಎಂದು ಹೇಳಿದರು.

Facebook Comments

Sri Raghav

Admin