ಚಾಲೆಂಜ್ ಮಾಡಿ ನದಿಗೆ ಜಿಗಿದು ನೀರಿನಲ್ಲಿ ಕೊಚ್ಚಿಹೋದ ಯುವಕ

ಈ ಸುದ್ದಿಯನ್ನು ಶೇರ್ ಮಾಡಿ

Jump--01

ಮೈಸೂರು, ಜು.11-ನದಿಗೆ ಜಿಗಿದು ಈಜು ಹೊಡೆಯುವ ಚಾಲೆಂಜ್ ಮಾಡಿದ ಐದು ಮಂದಿ ಯುವಕರಲ್ಲಿ ಒಬ್ಬ ಕೊಚ್ಚಿ ಹೋಗಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡಿನ ಮುಸಾಫರ್ ಶರೀಫ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ನಿನ್ನೆ ಸಂಜೆ ಮುಸಾಫರ್ ಶರೀಫ್ ತನ್ನ ನಾಲ್ವರು ಸ್ನೇಹಿತರೊಂದಿಗೆ ನಂಜನಗೂಡಿನ ಹಳೇ ಸೇತುವೆಯಿಂದ ಕಪಿಲಾ ನದಿಗೆ ಜಿಗಿದು ಅಲ್ಲಿಂದ ವೆಂಕಟೇಶ್ವರ ದೇವಾಲಯದವರೆಗೂ ಈಜಬೇಕೆಂದು ಚಾಲೆಂಜ್ ಕಟ್ಟಿಕೊಂಡಿದ್ದರು.

ಐದು ಮಂದಿಯೂ ಒಟ್ಟಿಗೆ ನದಿಗೆ ಜಿಗಿದಿದ್ದಾರೆ. ಆದರೆ ಮುಸಾಫರ್‍ಶರೀಫ್ ಕೊಚ್ಚಿಹೋಗಿದ್ದು ಈವರೆಗೆ ಪತ್ತೆಯಾಗಿಲ್ಲ. ಇಂದು ಬೆಳಗ್ಗೆಯೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರು ಬೋಟ್‍ಗಳ ಮೂಲಕ ನದಿಯ ಉದ್ದಕ್ಕೂ ಹುಡುಕಾಟ ನಡೆಸಿದ್ದಾರೆ. ಆತ ಬದುಕಿದ್ದಾನೆಯೋ, ಇಲ್ಲವೋ ಯಾವುದೂ ಗೊತ್ತಾಗಿಲ್ಲ. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin