ಬಿರುಗಾಳಿಗೆ ಹೈಟೆನ್ಷನ್ನಿನ ಬೃಹತ್ ವಿದ್ಯುತ್ ಟವರ್ ಬಿದ್ದ ಇಬ್ಬರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

power-tower1
ಸೂಲಿಬೆಲೆ, ಜು.11- ಹೊಸಕೋಟೆ ತಾಲೂಕು ಬಂಡಹಳ್ಳಿ ಬಳಿ ಬಿರುಗಾಳಿಗೆ ಬೃಹತ್ ಗಾತ್ರದ ಹೈಟೆನ್ಷನ್ ವಿದ್ಯುತ್ ಟವರ್ ಮುರಿದು ಬಿದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಗವಾನ್,ಮುಜಾಯಿ ರಹಮನ್ ಎಂದು ಗುರ್ತಿಸಲಾಗಿದೆ. ತಮಿಳುನಾಡಿನಿಂದ ಕರ್ನಾಟಕ ಮುಖಾಂತರ ಆಂದ್ರ ಪ್ರದೇಶಕ್ಕೆ ಹೈ ಟೆನ್ಷನ್ ವಿದ್ಯುತ್ ಸಂಪರ್ಕ ಕಾಮಗಾರಿಯನ್ನು ಕೈಗೊಳ್ಳ ಲಾಗಿದೆ.ಸಂಪರ್ಕ ಕಾಮಗಾರಿ ಹೊಸಕೋಟೆ ತಾಲೂಕಿನ ಬಂಡಹಳ್ಳಿ ಬಳಿ ಕಳೆದ ಮೂರು ತಿಂಗಳಿಂದ ನಡೆಯುತ್ತಿದೆ.

ನಿನ್ನೆ ಸಂಜೆ ಬಿರುಗಾಳಿ ಮಳೆಗೆ ಟವರ್ ಕುಸಿದು ಬಿದ್ದಿದೆ.ಈ ವೇಳೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿವೆ. ಟವರ್ ಬಿದ್ದ ಪರಿಣಾಮ ಗ್ರಾಮಗಳಿಗೆ ಸಂಪರ್ಕ ಕಲ್ಪಸುತ್ತಿದ್ದ ಎರಡು ವಿದ್ಯುತ್ ಟ್ರಾನ್ಸ್ ಫಾರ್ಮರ್,ರೈತರ ಪಂಪ್ ಸೆಟ್ ಗಳಿಗೆ ಹಾನಿಯಾಗಿದೆ.ಕಳಪೆ ಕಾಮಗಾರಿಯೇ ಟವರ್ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin