ಹಾಸನ ಜಿಲ್ಲಾ ಬಂದೀಖಾನೆಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ವಘೇಲಾ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Vaghela

ಹಾಸನ, ಜು.11- ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಿಎಚ್ ವಾಘೇಲಾ ಅವರು ಜಿಲ್ಲಾ ಬಂಧೀಖಾನೆಗೆ ಭೇಟಿ ನೀಡಿ ವಿಚಾರಣಾಧೀನ ಕೈದಿಗಳೊಂದಿಗೆ ಮಾತುಕತೆ ನಡೆಸಿದರು. ಬಂಧೀಖಾನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ ಅವರು, ಸೆರೆವಾಸಿಗಳಿಗೆ ಕೆಲಸ ಮಾಡಲು ಇರುವ ಅವಕಾಶಗಳು ಮತ್ತು ಆಸಕ್ತಿಗಳ ಬಗ್ಗೆ ಮಾಹಿತಿ ಪಡೆದರು.  ಇದೇ ವೇಳೆ ಬಂಧೀಖಾನೆ ಅಧೀಕ್ಷಕರಿಂದ ಮಾಹಿತಿ ಪಡೆದ ನ್ಯಾಯಮೂರ್ತಿಗಳು ಬಂಧೀಖಾನೆಯಲ್ಲಿ ವಿಚಾರಣಾಧೀನ ಖೈದಿಗಳಿಗೆ ಇತರ ಹಾಗೂ ಅವರ ಸಂಬಂಧಿಕರಿಗೆ ಮಾಡಿಕೊಡಬಹುದಾದ ಮಾನವೀಯ ಸಹಾಯ ಸೇವೆಗಳ ಬಗ್ಗೆ ಚಿಂತನೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಾಪುರ ವಾಡ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments

Sri Raghav

Admin