ಮರದಲ್ಲಿ ಮರುಸೃಷ್ಠಿಯಾದ ವಿಶ್ವಕಪ್ ಪ್ರೇರಿತ ಪ್ರತಿಮೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ds
ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಅನೇಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆ. ರಷ್ಯಾದ ಕಲಿನಿನ್‍ಗ್ರಾಡ್ ಪ್ರಾಂತ್ಯದ ಸ್ವಟಿಯೋಗೋಸ್ರ್ಕ್ ಪಟ್ಟಣ ಈಗ ವಿಶ್ವಕಪ್ ಪ್ರೇರಿತ ಮರದ ಪ್ರತಿಮೆಗಳ ಸೃಷ್ಟಿಗೆ ಸಾಕ್ಷಿಯಾಗಿದೆ.  ರಷ್ಯಾದ ಕಲಿನಿನ್‍ಗ್ರಾಡ್ ಪ್ರಾಂತ್ಯದ ಉತ್ತರ ಭಾಗದಲ್ಲಿ ರುವ ಕರಾವಳಿ ನಗರಿ ಸ್ವಟಿಯೋ ಗೋಸ್ರ್ಕ್ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸ್ಫೂರ್ತಿಯೊಂದಿಗೆ ಕಲಾ ಪ್ರತಿಮೆಗಳ ಸೃಷ್ಟಿಯ ತಾಣವಾಗಿದೆ. ಫಿಫಾ ವಿಶ್ವಕಪ್ ಮತ್ತು ರಷ್ಯಾ-ಸರ್ಜಿಯಾ ಸೇಹ್ನದ ಸಂಕೇತವು ಇಲ್ಲಿ ಮರದ ಪುತ್ಥಳಿಗಳಲ್ಲಿ ರೂಪು ಪಡೆದಿವೆ.  ರಷ್ಯಾದ ವಿವಿಧ ರಾಜ್ಯಗಳ ಎಂಟು ಕಲಾವಿದರು ಈ ನಗರದಲ್ಲಿ ಮರ ಕೆತ್ತನೆ ಉತ್ಸವದಲ್ಲಿ ನಾ ಮುಂದು ತಾ ಮುಂದು ಎಂಬಂತೆ ವುಡನ್ ಸ್ಟ್ಯಾಚುಗಳನ್ನು ಸೃಷ್ಟಿಸಿದರು.

ds-1

ವಿವಿಧ ಕೌಶಲ್ಯಗಳು ಮತ್ತು ಸಾಧನ ಸಲಕರಣೆಗಳನ್ನು ಬಳಸಿ, ದೊಡ್ಡ ಮರದ ದಿಮ್ಮಿಗಳನ್ನು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದ ಶುಭ ಸೂಚಕ ಚಿಹ್ನೆಯಾದ ಝಬಿವಾಕಾ, ಸ್ಟಾರ್‍ವಾರ್ಸ್ ಚಿತ್ರದ ಪಾತ್ರಧಾರಿ ಸ್ಟಾರ್‍ಟ್ರೂಪರ್, ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್ ಮೊದಲಾದವರ ಪ್ರತಿಮೆಗಳನ್ನು ಕಲಾವಿದರು ಕೆತ್ತಿಸಿದರು. ಫುಟ್ಬಾಲ್ ಪಂದ್ಯಾವಳಿ ವೇಳೆ ಸರ್ಬಿಯಾ ಫುಟ್ಬಾಲ್ ತಂಡಕ್ಕಾಗಿ ಸ್ವೆಟಿಯೋಗೋಸ್ರ್ಕ್ ತರಬೇತಿ ಶಿಬಿರವಾದಾಗಿನಿಂದ ರಷ್ಯಾ-ಸರ್ಬಿಯಾ ಸ್ನೇಹ ಸಂಬಂಧ ಮತ್ತಷ್ಟು ಬಲಗೊಂಡಿದೆ. ಇದನ್ನು ಮರದ ಕೆತ್ತನೆ ಉತ್ಸವದಲ್ಲಿ ಸಾಂಕೇತಿಕವಾಗಿ ಪ್ರತಿಬಿಂಬಿಸಲಾಗಿದೆ ಎಂದು ಸಂಘಟಕರು ವಿವರಿಸಿದ್ದಾರೆ. ಇಲ್ಲಿ ಕೆತ್ತಲಾದ ಮರದ ಪುತ್ಥಳಿಗಳನ್ನು ಪಟ್ಟಣದ ಕೇಂದ್ರ ಭಾಗದಲ್ಲಿರುವ ನೂತನವಾಗಿ ತೆರೆಯಲಾದ ರಷ್ಯಾ-ಸರ್ಬಿಯಾ ಸ್ನೇಹ ಚೌಕಕ್ಕೆ ಸ್ಥಳಾಂತರಿಸಲಾಗಿದೆ.

Facebook Comments

Sri Raghav

Admin