ಅಪಘಾತದಲ್ಲಿ 13 ಅಮರನಾಥ ಯಾತ್ರಿಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Accident

ಜಮ್ಮು, ಜು.12-ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 13 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಯಾತ್ರಾರ್ಥಿಗಳಿದ್ದ ಟೆಂಪೋ ನಿಂತಿದ್ದ ಟ್ರಕ್‍ಗೆ ಅಪ್ಪಳಿಸಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಕಾಶ್ಮೀರದ ಜಮ್ಮುವಿನಿಂದ 70 ಕಿಮೀ ದೂರದಲ್ಲಿರುವ ಉಧಾಂಪುರ್ ಜಿಲ್ಲೆಯ ಮಲ್ಲಾರ್ಡ್ ಪ್ರದೇಶದ ಧೇರ್ಮಾ ಸೇತುವೆ ಬಳಿ 5.30ರಲ್ಲಿ ಈ ಅಪಘಾತ ಸಂಭವಿಸಿದೆ. ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ನಿಲುಗಡೆಯಾಗಿದ್ದ ಟ್ರಕ್‍ಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವಾಹನದಲ್ಲಿದ್ದ 13 ಯಾತ್ರಿಗಳು ಗಾಯಗೊಂಡಿದ್ದು, ಉಧಾಂಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. 630 ಮಹಿಳೆಯರು ಮತ್ತು 201 ಸಾಧುಗಳನ್ನೂ ಒಳಗೊಂಡಂತೆ ಅಮರನಾಥ ಯಾತ್ರೆ ಆರಂಭಿಸಿದ 3,419 ಯಾತ್ರಾರ್ಥಿಗಳ ತಂಡದಲ್ಲಿ ಇವರೂ ಇದ್ದರು.

Facebook Comments

Sri Raghav

Admin