ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕದಿಯುತ್ತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

3-Arrested-01

ಬೆಂಗಳೂರು, ಜು.12-ಮನೆ ಮುಂದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದಂತಹ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿ 4.5 ಲಕ್ಷ ರೂ. ಬೆಲೆಯ 9 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪುನೀತ್(21), ಪೃಥ್ವಿರಾಜ್(21) ಮತ್ತು ಮಧುಕುಮಾರ್(19) ಬಂಧಿತ ಬೈಕ್ ಕಳ್ಳರು.

ಜೂ.1 ರಂದು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ಬೈಕ್ ಕಳ್ಳರ ಪತ್ತೆಗೆ ತನಿಖೆ ಕೈಗೊಂಡು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿಗಳ ಬಂಧನದಿಂದ ಸುಬ್ರಹ್ಮಣ್ಯನಗರ ಠಾಣೆಯ 3 ಪ್ರಕರಣ, ಮಹಾಲಕ್ಷ್ಮೀ ಲೇಔಟ್, ತುಮಕೂರಿನ ಬಡಾವಣೆ ಠಾಣೆ, ಜಯನಗರ ಠಾಣೆಯ ತಲಾ ಒಂದೊಂದು ಪ್ರಕರಣಗಳು ಪತ್ತೆಯಾದಂತಾಗಿದೆ. ಸುಬ್ರಹ್ಮಣ್ಯನಗರ ಠಾಣೆ ಇನ್ಸ್‍ಪೆಕ್ಟರ್ ಮಹೇಂದ್ರಕುಮಾರ್ ಹಾಗೂ ಪಿಎಸ್‍ಐ ಶ್ರೀಕಂಠೇಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

Facebook Comments

Sri Raghav

Admin