ರೋಚಕ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ಮಣಿಸಿ ಮೊದಲಬಾರಿಗೆ ಫೈನಲ್‍ಗೇರಿದ ಕ್ರೊವೇಷ್ಯಾ

ಈ ಸುದ್ದಿಯನ್ನು ಶೇರ್ ಮಾಡಿ

Fifa-01

ಮಾಸ್ಕೋ, ಜು.12-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಎರಡನೇಸೆಮಿ ಫೈನಲ್ ಹಣಾಹಣಿಯಲ್ಲಿ ಕ್ರೊವೇಷ್ಯಾ ತಂಡ ಬಲಿಷ್ಠ ಇಂಗ್ಲೆಂಡ್‍ನನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದ ಇಂಗ್ಲೆಂಡ್ ಈ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದು. ಮುಖಭಂಗದೊಂದಿಗೆ ಪಂದ್ಯಾವಳಿಯಿಂದ ಹೊರಬಿದ್ದಿದೆ. ಪಂದ್ಯದ ಆರಂಭದಲ್ಲೇ ಕ್ರೊವೇಷ್ಯಾಗೆ ಆಘಾತ ನೀಡಿದ ಟ್ರಿಪ್ಪರ್ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.

Fifa 01 4

ಅತ್ಯಂತ ಪ್ರಬಲ ತಂಡ ಇಂಗ್ಲೆಂಡ್ ವಿಶ್ವಕಪ್ ಪಂದ್ಯಾವಳಿಯಿಂದ ನಿರ್ಗಮಿಸಿರುವುದು ಬ್ರಿಟನ್ ಫುಟ್ಬಾಲ್ ಪ್ರೇಮಿಗಳಿಗೆ ದೊಡ್ಡ ಆಘಾತ ಉಂಟು ಮಾಡಿದೆ. ಇದೇ ಮೊಟ್ಟಮೊದಲ ಬಾರಿ ವಿಶ್ವಕಪ್ ಫುಟ್ಬಾಲ್‍ನಲ್ಲಿ ಫೈನಲ್ ತಲುಪಿರುವ ಕ್ರೊವೇಷ್ಯಾ ಐತಿಹಾಸಿಕ ಸಾಧನೆ ಮಾಡಿ ವಿಶ್ವವನ್ನೇ ಬೆರಗುಗೊಳಿಸಿದ್ದು, ಜು.15ರ ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

Fifa 01

ನಿನ್ನೆ ತಡರಾತ್ರಿ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ 90 ನಿಮಿಷಗಳ ಪೂರ್ಣಾವಧಿ ಆಟದ ಮುಕ್ತಾಯಕ್ಕೆ ಇಂಗ್ಲೆಂಡ್ ಮತ್ತು ಕ್ರೊವೇಷ್ಯಾ 1-1ರಲ್ಲಿ ಸಮಬಲ ಸಾಧಿಸಿ ರೋಚಕ ತಿರುವು ನೀಡಿತು. ಒಂದೂವರೆ ತಾಸಿನಲ್ಲಿ ಫಲಿತಾಂಶ ಹೊರಬೀಳದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಮಯ ವಿಸ್ತರಿಸಲಾಯಿತು. ಈ ಅವಧಿಯಲ್ಲಿ ಕ್ರೊವೇಷ್ಯಾದ ಮಾರಿಯೋ ಮ್ಯಾಂಡ್ಯೂ, ಕಿಕ್ ಗೋಲು ಬಾರಿಸುವ ಮೂಲಕ ತಂಡವನ್ನು ಫೈನಲ್ ಪ್ರವೇಶಿಸುವಂತೆ ಮಾಡಿ ಹೀರೋ ಆದರು.

ಇಂಗ್ಲೆಂಡ್ ಆರಂಭಿಕ ಮುನ್ನಡೆ :

Fifa 03

ಪಂದ್ಯ ಆರಂಭಗೊಂಡ ಐದು ನಿಮಿಷದಲ್ಲೇ ಕ್ರೊವೇಷ್ಯಾಗೆ ಆಘಾತ ನೀಡಿದ ಕೀರನ್ ಟ್ರಿಪಿಯರ್ ಇಂಗ್ಲೆಂಡ್‍ಗೆ ಒಂದು ಗೋಲಿನ ಮುನ್ನಡೆ ತಂದುಕೊಟ್ಟರು. ಕ್ರೋವೇಷ್ಯಾ ತಂಡದ ಲೋಪವನ್ನು ಸಮರ್ಥವಾಗಿ ಬಳಸಿಕೊಂಡ ಟ್ರಿಪಿಯರ್ ವಿಶ್ವವಿಖ್ಯಾತ ಆಟಗಾರ ಡೇವಿಡ್ ಬೇಕಮ್ ಸ್ಟೈಲ್‍ನಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು. ಇದು ಟ್ರಿಪಿಯರ್‍ಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಥಮ ಗೋಲು.

ಒಂದು ಹಂತದಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಡೆಲೆ ಅಲಿ ಮತ್ತು ಕ್ರೊವೇಷ್ಯಾದ ಮೊಡ್ರಿಕ್ ನಡುವೆ ಚೆಂಡಿಗಾಗಿ ತೀವ್ರ ಗೊಂದಲ ಉಂಟಾಯಿತು. ಈ ಸಂದರ್ಭದಲ್ಲಿ ಮೊಡ್ರಿಕ್ ಮಾಡಿದ ಯಡವಟ್ಟು ಇಂಗ್ಲೆಂಡ್‍ಗೆ ಫ್ರೀ-ಕಿಕ್ ಅವಕಾಶ ತಂದುಕೊಟ್ಟಿತು. ಇದನ್ನು ಸದುಪಯೋಗ ಮಾಡಿಕೊಂಡ ಟ್ರಿಪಿಯರ್ ಚೆಂಡನ್ನು ಪೆÇೀಸ್ಟ್ ಕಾರ್ನರ್‍ನತ್ತ ಬಲವಾಗಿ ಬಾರಿಸಿದರು. ಇದನ್ನು ತಡೆಯುವಲ್ಲಿ ಕ್ರೊವೇಷ್ಯಾ ಗೋಲ್ ಕೀಪರ್ ವಿಫಲರಾದರು. ಇದರಿಂದ ಇಂಗ್ಲೆಂಡ್ ಆರಂಭಿಕ ಮುನ್ನಡೆ ಸಾಧಿಸಿತು. ನಂತರ ಎರಡು ತಂಡಗಳ ನಡುವೆ ಗೋಲು ಬಾರಿಸಲು ಭಾರೀ ಹರಸಾಹಸ ಮುಂದುವರಿಯಿತು. ಆದರೆ ಪಂದ್ಯದ 68ನೇ ನಿಮಿಷದಲ್ಲಿ ಕ್ರೊವೇಷ್ಯಾದ ಇವಾನ್ ಪೆರಿಸಿಕ್ ಗೋಲು ಬಾರಿಸುವ ಮೂಲಕ ತಂಡ ಸಮಬಲ ಸಾಧಿಸುವಂತೆ ಮಾಡಿದರು.

ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ಮತ್ತು ಕ್ರೊವೇಷ್ಯಾ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿದ್ದರಿಂದ ಹೆಚ್ಚುವರಿ ಸಮಯಕ್ಕೆ ಪಂದ್ಯ ವಿಸ್ತರಿಸಲಾಯಿತು. ಈ ಅವಧಿಯಲ್ಲಿ ಕ್ರೊವೇಷ್ಯಾದ ಮಾರಿಯೋ ಮ್ಯಾಂಡ್ಯು ತಂಡಕ್ಕೆ ಆಪತ್ಬಾಂಧವರಾದರು. ಭರ್ಜರಿ ಕಿಕ್ ಮೂಲಕ ಗೋಲು ಬಾರಿಸಿದ ಮಾರಿಯೋ, ಕ್ರೊವೇಷ್ಯಾ ತಂಡವು 2-1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಫೈನಲ್ ತಲುಪಿತು. ಬೆಲ್ಜಿಯಂ ತಂಡವನ್ನು ಮಣಿಸಿ ಫೈನಲ್ ತಲುಪಿರುವ ಫ್ರಾನ್ಸ್ ಮತ್ತು ಕ್ರೊವೇಷ್ಯಾ ನಡುವೆ ಜುಲೈ 15 ಭಾನುವಾರ ಫೈನಲ್ ಪಂದ್ಯ ನಡೆಯಲಿದ್ದು, ಕದನ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin