ಟ್ರ್ಯಾಕ್ಟರ್‌ ಮಗುಚಿ ಬಿದ್ದು ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎನ್.ನಾಗರಾಜು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Nagaraju-01

ಮಂಡ್ಯ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಟ್ರ್ಯಾಕ್ಟರ್‌ ಮಗುಚಿ ಬಿದ್ದು ನಿವೃತ್ತ ಐಎಎಸ್‌ ಅಧಿಕಾರಿ ಎಸ್. ಎನ್. ನಾಗರಾಜು (65) ಅವರು ಮೃತಪಟ್ಟಿದ್ದಾರೆ. ಪಾಂಡವಪುರ ತಾಲೂಕು ಬ್ಯಾಡರಹಳ್ಳಿ ಗ್ರಾಮದಲ್ಲಿ  ಈ ಘಟನೆ ನಡೆದಿದೆ.  ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ನಾಗರಾಜು, ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಗುರುವಾರ ಮಧ್ಯಾಹ್ನ ಟ್ಯಾಕ್ಟರ್ ಚಲಾಯಿಸುವ ವೇಳೆ ಏರಿ ಮೇಲೆ ಹೋಗುವಾಗ ಟ್ರಾಕ್ಟರ್‌ ಪಲ್ಟಿಯಾಗಿದೆ. ಮಳೆ ಬಂದು ಕೆಸರಾಗಿದ್ದರಿಂದ ಟ್ರಾಕ್ಟರ್‌ ನಿಯಂತ್ರಣ ತಪ್ಪಿ ಉರುಳಿದೆ. ಈ ವೇಳೆ ನಾಗರಾಜ್ ಅವರು ತಪ್ಪಿಸಿಕೊಳ್ಳಲು ಹೊರಗೆ ಹಾರಿದ್ದಾರೆ. ಆದರೆ ಟ್ಯಾಕ್ಟರ್ ಹಿಂಬದಿ ಚಕ್ರ ಮೇಲೆ ಅವರ ಎದೆ ಮೇಲೆ ಹರಿದು ನಾಗರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗರಾಜು ಅವರ 2 ಕಣ್ಣುಗಳನ್ನು ದಾನ ಮಾಡಲಾಗಿದೆ. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Facebook Comments

Sri Raghav

Admin