ಬೆಂಕಿ ಹಚ್ಚಿ ಮೂವರು ಸಂಬಂಧಿಕರನ್ನೇ ಕೊಂದಿದ್ದವನಿಗೆ ಪೊಲೀಸರಿಂದ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Crime-Gulbarga

ಕಲಬುರಗಿ, ಜು.12-ಬೆಂಕಿ ಹಚ್ಚಿ ಮೂವರು ಸಂಬಂಧಿಕರನ್ನೇ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಹಂತಕನ ಮೇಲೆ ಕಲಬುರಗಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಮೊಹಮ್ಮದ್ ಮುಸ್ತಫಾ ಪೊಲೀಸರ ಗುಂಡೇಟಿನಿಂದ ಬಂಧಿತನಾಗಿರುವ ಹಂತಕ. ಜಿಲಾನಾಬಾದ್ ಬಡಾವಣೆ ನಿವಾಸಿಯಾದ ಆರೋಪಿ ಮೊಹಮ್ಮದ್ ಮುಸ್ತಫಾ ಕೌಟುಂಬಿಕ ವಿಚಾರವಾಗಿ ಸಂಬಂಧಿಕರೊಂದಿಗೆ ಜಗಳವಾಡುತ್ತಿದ್ದನು. ಇದೇ ದ್ವೇಷದಿಂದ ಸಂಬಂಧಿಕರನ್ನು ಮುಗಿಸಲು ಸಂಚು ರೂಪಿಸಿ ಅದರಂತೆ ಇತ್ತೀಚೆಗೆ ಸಂಬಂಧಿ ಮನೆಗೆ ಅವರು ಮಲಗಿದ್ದಾಗ ವೇಳೆ ಬೆಂಕಿ ಹಚ್ಚಿದ್ದನು.

ಪರಿಣಾಮವಾಗಿ ಮನೆಯಲ್ಲಿದ್ದ ಮೂವರು ಸಜೀವವಾಗಿ ಸಾವನ್ನಪ್ಪಿದ್ದರು. ಮೂವರು ಸಂಬಂಧಿಕರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಈತನ ಪತ್ನಿಗಾಗಿ ಕಲಬುರಗಿ ಪೊಲೀಸರು ವಿಶೇಷ ತಂಡ ರಚಿಸಿದ್ದರು.ಈ ತಂಡ ತ್ರಿಬಲ್ ಮರ್ಡರ್ ಹಂತಕನಿಗಾಗಿ ಶೋಧ ಕೈಗೊಂಡಿದ್ದಾಗ ಮುಂಜಾನೆ ಈತ ಕಲಬುರಗಿಯ ಬುದ್ಧ ವಿಹಾರದ ಸಮೀಪ ಇರುವುದನ್ನು ಪತ್ತೆಹಚ್ಚಿದ್ದಾರೆ. ತಕ್ಷಣ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ.

ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಆರೋಪಿ ಮೊಹಮ್ಮದ್ ಮುಸ್ತಫಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಶರಣಾಗುವಂತೆ ಸೂಚಿಸಿದರೂ ಕೇಳದೆ ಕಾನ್‍ಸ್ಟೆಬಲ್‍ಗಳಾದ ಸದರ ಪಟೇಲ್, ಸಲೀಂ ಮತ್ತು ಶಿವಲಿಂಗ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯತ್ತ ಗುಂಡು ಹಾರಿಸಿದ್ದು, ಈ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಎಸ್‍ಪಿ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin