ಕರುನಾಡ ಚಕ್ರವರ್ತಿಗೆ ಇಂದು 56ನೇ ಹುಟ್ಟುಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

Shivarajkumar--01

ಬೆಂಗಳೂರು,ಜು.12-ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 56ನೇ ವಸಂತಕ್ಕೆ ಕಾಲಿಟ್ಟಿದ್ದು, ಇಂದು ತಮ್ಮ ಕುಟುಂಬ ವರ್ಗದವರು ಮತ್ತು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಹುಟ್ಟಹಬ್ಬ ಆಚರಿಸಿಕೊಂಡರು. ಶಿವರಾಜ್‍ಕುಮಾರ್ ಹುಟ್ಟಹಬ್ಬಕ್ಕೆ ಶುಭ ಹಾರೈಸಿ ಅಭಿಮಾನಿಗಳು ಮಾನ್ಯತಾ ಟೆಕ್ ಪಾರ್ಕ್ ಸಮೀಪವಿರುವ ಅವರ ಮನೆಯ ಮುಂದೆ ರಾತ್ರಿಯೇ ಜಮಾಯಿಸಿದ್ದರು.

ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಷಯ ಕೋರಿ ವಿವಿಧ ಮಾದರಿಯ ಕೇಕ್‍ಗಳನ್ನು ಕತ್ತರಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಪತ್ನಿ ಶಿವರಾಜ್‍ಕುಮಾರ್, ಸಹೋದರ ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ವಿನಯ್ ರಾಜ್‍ಕುಮಾರ್ ಮನೆಯಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದರು.  ಮಧ್ಯರಾತ್ರಿಯಿಂದಲೇ ಮನೆ ಮುಂದೆ ನಿಂತು ನನ್ನ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳಿಗೆ ನಾನು ಯಾವತ್ತೂ ಋಣಿಯಾಗಿರುತ್ತೇನೆ. ನಿಮಗಾಗಿ ಮುಂದೆಯೂ ಉತ್ತಮ ಚಿತ್ರಗಳನ್ನು ನೀಡುತ್ತೇನೆ ಎಂದು ಶಿವರಾಜ್‍ಕುಮಾರ್ ಹೇಳಿದರು.ನನ್ನ ಬೆನ್ನುಲುಬಾಗಿ ನಿಂತಿರುವ ಪತ್ನಿ ಗೀತಾ, ನಿರ್ಮಾಪಕರು ಹಾಗೂ ನಿರ್ದೇಶಕರು ನೀಡಿರುವ ಸಹಕಾರವನ್ನು ಎಂದೂ ಮರೆಯುವುದಿಲ್ಲ ಎಂದರು.

ಈ ವರ್ಷ ವಿಶೇಷ ಏನೆಂದರೆ, ನನ್ನ ಮಗಳು ಬರ್ತ್ ಡೇ ಗಿಫ್ಟ್ ಆಗಿ ಶಿವರಾಜ್ ಹೆಸರಿನ ಟೀಶರ್ಟ್ ನೀಡಿದ್ದು, ಇದು ನನಗೆ ತುಂಬಾ ಸಂತಸ ತಂದಿದೆ ಎಂದು ಖುಷಿಪಟ್ಟರು. ಇತ್ತೀಚೆಗಷ್ಟೇ ದಿ ವಿಲನ್ ಟೀಸರ್ ಬಿಡುಗಡೆಯಾಗಿದೆ. ದ್ರೋಣ ಚಿತ್ರದ ಮುಹೂರ್ತ ಸಮಾರಂಭವು ನಡೆದಿದೆ. ಈ ಚಿತ್ರಗಳನ್ನು ಸಹ ಜನರು ನೋಡಿ ನನಗೆ ಆಶೀರ್ವದಿಸಬೇಕೆಂದು ಶಿವರಾಜ್‍ಕುಮಾರ್ ಕೋರಿದರು.

ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ, ಶಿವ ಮೆಚ್ಚಿನ ಕಣ್ಣಪ್ಪ , ಜೋಗಿ, ಜೋಗಯ್ಯ, ಸಂತ, ದೊರೆ, ಭಜರಂಗಿ, ಮುತ್ತಣ್ಣ, ಶ್ರೀಕಂಠ, ಓಂ, ಕೋದಂಡರಾಮ, ಮಫ್ತಿ, ರಣರಂಗ, ಕಡ್ಡಿಪುಡಿ, ಅಣ್ಣಾವ್ರ ಮಕ್ಕಳು ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ಹ್ಯಾಟ್ರೀಕ್ ಹೀರೋ ನೀಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.   ಈಗಾಗಲೇ 150 ದಿನಗಳನ್ನು ಪೂರೈಸಿರುವ ಟಗರು ಚಿತ್ರದ 2ನೇ ಭಾಗ ಟಗರು-2 ಕೂಡ ಚಿತ್ರೀಕರಣಕ್ಕೆ ಸಿದ್ದಗೊಂಡಿದೆ.   ಅಖಿಲ ಕರ್ನಾಟಕ ಶಿವರಾಜ್‍ಕುಮಾರ್ ಅಭಿಮಾನಿ ಸಂಘ ಸೇರಿದಂತೆ ಇನ್ನಿತರ ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘಗಳು ಕೂಡ ತಮ್ಮ ನೆಚ್ಚಿನ ಹೀರೋನ ಹುಟ್ಟಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

Facebook Comments

Sri Raghav

Admin