ಮಕ್ಕಳಿಂದ ಶಾಲೆಯ ಶೌಚಾಲಯ ಸ್ವಚ್ಛತೆ ಮಾಡಿಸಿದ ಶಿಕ್ಷಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ. ಜು. 13 : ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಒಂದು ಕಡೆ ಆದರೆ ಇನ್ನೊಂದು ಕಡೆ ಶಾಲೆಗೆ ಬರುವ ಮಕ್ಕಳಿಂದ ಕೆಲಸವನ್ನು ಶಿಕ್ಷಕ ವೃಂದ ಮಾಡಿಸಿಕೊಳ್ಳುತ್ತಿದೆ. ಬಡವರು ಹಣವಿಲ್ಲದವರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶಾಲೆಗೆ ಕಳುಹಿಸುತ್ತಾರೆ. ತಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಒಳ್ಳೆಯ ಶಿಕ್ಷಣ ತೆಗೆದುಕೊಂಡು ಉನ್ನತ ಹುದ್ದೆಗೆ ಹೋಗುತ್ತಾರೆ ಎಂಬ ಕನಸು ಎಲ್ಲಾ ಪೋಷಕರು ಹೊಂದಿರುತ್ತಾರೆ. ಇನ್ನೂ ಬಡವರ ಮಕ್ಕಳನ್ನು ಖಾಸಗಿ‌ ಶಾಲೆಯಲ್ಲಿ ಓದಿಸುವ ಶಕ್ತಿ ಇಲ್ಲದ ಕಾರಣ ಸರಕಾರಿ ಶಾಲೆಗಳೆ ಮೇಲೆ ಅವಲಂಬನೆವಾಗಿರುತ್ತಾರೆ.

Student--01

ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಲ್ಲಿ ಎನ್ನುವ ನಿಟ್ಟಿನಲ್ಲಿ ಸರ್ಕಾರ ಇನ್ನಿಲ್ಲದ ಸೌಲಭ್ಯ ಕಲ್ಪಿಸಿದ್ದರು ಸರ್ಕಾರಿ ಶಾಲೆಯ ಶಿಕ್ಷಕ ವೃಂದ ಮಕ್ಕಳ ಭವಿಷ್ಯದ ಮೇಲೆ ಬರೆ ಏಳೆಯಲು ಶಾಲಾ ಕೆಲಸಗಳನ್ನು ಮಕ್ಕಳ ಕೈಯಲ್ಲಿ ಮಾಡಿಸುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಮಕ್ಕಳನ್ನು ಶೌಚಾಲಯ ಸ್ವಚ್ಚತೆಗೆ ಬಳಸಿಕೊಳ್ಳುತ್ತಿರುವ ವಿಡಿಯೋ ಈಗ ಈ ಸಂಜೆಗೆ ಲಭ್ಯವಾಗಿದೆ.

ಚಿಕ್ಕ ಮಕ್ಕಳನ್ನು ಶಾಲೆಯ ಶೌಚಾಲಯ ಸ್ವಚ್ಚತೆಗೆ ಬಳಸಿಕೊಂಡ ಅಮಾನವೀಯ ಘಟನೆ ಹುಕ್ಕೇರಿ ತಾಲೂಕಿನ ಶಿರಡಾಣ ಕ್ರಾಸ್ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲಾ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧವಿದ್ದರು, ಮಕ್ಕಳನ್ನು ಶೌಚಾಲಯ ತೊಳೆಯಲು ಬಳಸಿರುವ ಶಿಕ್ಷಕರು ಅಮಾನವೀಯ ತೋರಿದ್ದಾರೆ. ಒಂದು ವೇಳೆ ಮಕ್ಕಳನ್ನು ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಂಡರೂ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಶಿಕ್ಷಣ ಅಧಿಕಾರಿಗಳಿಗೆ ಇದ್ದರೂ ಕಣ್ಣು ಮುಚ್ಚಿ ಕುಳಿತಿರುವುದು ಸುಳ್ಳಲ್ಲ.

ಸರಕಾರಿ ಶಾಲೆಯಲ್ಲಿ ಮಕ್ಕಳನ್ನು ಕೆಲಸ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಿರುವ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಮಾನವೀಯ ತೋರುತ್ತಿರುವುದು ಶಿಕ್ಷಣ ಇಲಾಖೆ ಗೋತ್ತಿದ್ದರು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ಸಾರ್ವಜನಿಕರ ಕೆಂಗ್ಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿಯವರನ್ನು ಕೇಳಿದರೆ ಹೊಸ ಶೌಚಾಲಯ ಸರ್ ಅದು. ಇದು ಶಾಲೆವಯರಿಗೆ ಹಸ್ತಾಂತರಾವಾಗಿಲ್ಲಾ. ಮಕ್ಕಳೇ ದಿನಾಲು ಬಂದು ನೀರು ಹೊಡೆಯುತ್ತಾರೆ.

ಮುಖ್ಯಾಧ್ಯಪಕರು ಹಾಗೂ ಗ್ರಾಮಸ್ಥರು ಹೇಳಿದ್ದಾರೆ ಎಂದು ಸಮರ್ಥನೆಯ ಉತ್ತರ ಕೊಟ್ಟು ಜಾರಿಕೊಳ್ಳುವ ಕೆಲಸ ಮಾಡಿದರು. ಅದೇ ರೀತಿ ನಾನು ವಿಡಿಯೋ ಸರಿಯಾಗಿ ನೋಡಿಲ್ಲಾ ಎಂದು ಮತ್ತೇ ಬೇರೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿಹಾಕಿಕೊಂಡಿದ್ದಾರೆ. ಆದರೆ ನಾವು ಹೇಳೊದು ಮಕ್ಕಳು ಶಾಲೆಗೆ ಬರುವ ವಿದ್ಯಾಭ್ಯಾಸ ಮಾಡುವುದಕ್ಕಾಗಿ ಶಾಲೆಯ ಕೆಲಸಗೊಸ್ಕರ ಅಲ್ಲಾ. ಈ ಸಮಸ್ಯೆ ಡಿಡಿಪಿಐ ಸೇರಿದಂತೆ ಮೇಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಈ ಘಟನೆ ಭಾಗಿಯಾಗಿದ್ದ ಶಾಲಾ ಮುಖ್ಯೋಪಾಧ್ಯ ಮೇಲೆ ಹಾಗೂ ಶಿಕ್ಷಕರ ಮೇಲೆ ಕ್ರಮ ಜರುಗಿಸುವರೆಗೂ ಹಾಗೂ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಅಧಿಕಾರಿ ಬೆನ್ನು ಬಿಡಲ್ಲಾ ಈ ಸಂಜೆ ಬಿಸಿ‌ಮುಟ್ಟಿಸುತ್ತದೆ.

Facebook Comments

Sri Raghav

Admin