ಮುಜಾಫರ್ ಜಿಲ್ಲೆಯ ಗಂಗಾ ಕಾಲುವೆಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಪಟು ಮೃತದೇಹ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ಮುಜಾಫರ್‍ನಗರ್, ಜು.12-ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ ಗಂಗಾ ಕಾಲುವೆಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಪಟು ಮೃತದೇಹ ಪತ್ತೆಯಾಗಿದೆ. ಖಾಟೋಲಿ ಪಟ್ಟಣದ ಅಭಿಷೇಕ್ ಶರ್ಮ(21) ರಾಷ್ಟ್ರೀಯ ಮಟ್ಟದ ಬಾಕ್ಸರ್. ಭಾನುವಾರ ಇವರು ಕಾಲುವೆಯಲ್ಲಿ ಸ್ನಾನ ಮಾಡುತ್ತಿದ್ದಾಗ ರಭಸದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮುಳುಗು ತಜ್ಞರ ತೀವ್ರ ಶೋಧದ ಬಳಿಕ ನಿನ್ನೆ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಜುಲೈ 20ರಂದು ಅಲಹಾಬಾದ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಅಭಿಷೇಕ್ ಶರ್ಮ ಸೆಣಸಬೇಕಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

Facebook Comments

Sri Raghav

Admin