ಶಾಲೆಯಬಿಸಿಯೂಟ ಸೇವನೆ ಸೇವಿಸಿ 10 ಮಕ್ಕಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Mid-Day-Meal
ಕೋಲಾರ, ಜು.13- ಬಿಸಿಯೂಟ ಆಹಾರ ಸೇವಿಸಿ 10 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಕಾಮಸಮುದ್ರಂ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಗಾರಪೇಟೆ ತಾಲ್ಲೂಕಿನ ದೊಡ್ಡಪನ್ನೆಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಿಸಿಯೂಟ ಮಾಡಿದ ತಕ್ಷಣವೇ ವಾಂತಿ ಮಾಡಿಕೊಂಡಿದ್ದಾರೆ.  ಬಿಸಿಯೂಟಕ್ಕೆ ಹಲ್ಲಿ ಬಿದ್ದಿದ್ದನ್ನು ಗಮನಿಸದೆ ಅಡುಗೆ ಸಹಾಯಕಿ ಮಕ್ಕಳಿಗೆ ಊಟ ಬಡಿಸಿದ್ದಾರೆ. ಆಹಾರ ಸೇವಿಸಿದ ಸ್ವಲ್ಪ ಹೊತ್ತಲ್ಲೇ 10 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ.  ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳನ್ನು ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Facebook Comments

Sri Raghav

Admin