53 ಗಂಟೆ 5 ನಿಮಿಷಗಳ ಕಾಲ ನಡೆದಿ ವಿಧಾನಸಭೆ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

BJP Session
ಬೆಂಗಳೂರು, ಜು.13- ಹದಿನೈದನೇ ವಿಧಾನಸಭೆಯ ಮೊದಲ ಅಧಿವೇಶನದ ಎರಡನೇ ಮುಂದುವರೆದ ಉಪವೇಶನವು 53 ಗಂಟೆ 5 ನಿಮಿಷಗಳ ಕಾಲ ನಡೆದಿದೆ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಹೇಳಿದರು. ಕಳೆದ ಜುಲೈ 2ರಿಂದ ಇಂದಿನ ವರೆಗೆ 12 ದ್ಞಿನಗಳ ಕಾಲ ವಿಧಾನಸಭೆ ಕಾರ್ಯಕಲಾಪಗಳು ನಡೆದಿವೆ. ಜು.2ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸದ್ಯರನ್ನು ಉದ್ದೇಶಿಸಿ ಮಾತನಾಡಿದ್ದರು. ಭಾಷಣ ಮೇಲಿನ ವಂದನಾ ನಿರ್ಣಯದ ಪ್ರಸ್ತಾವನೆ ಮೇಲೆ 16 ಗಂಟೆ 26 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ 27 ಸದಸ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿಗಳು ಚರ್ಚೆಗೆ ಉತ್ತರ ನೀಡಿದ ನಂತರ ವಂದನಾ ನಿರ್ಣಯ ಪ್ರಸ್ತಾವನೆಯೂ ಅಂಗೀಕೃತವಾಗಿದೆ ಎಂದರು.

ಜು.5ರಂದು ಮುಖ್ಯಮಂತ್ರಿಗಳು ಮಂಡಿಸಿದ 2018-19ನೇ ಸಾಲಿನ ಆಯವ್ಯಯದ ಮೇಲೆ 16 ಗಂಟೆ 16 ನಿಮಿಷಗಳ ಕಾಲ 32 ಸದಸ್ಯರು ಚರ್ಚೆ ನಡೆಸಿದ್ದರು. ನಿನ್ನೆ ಮುಖ್ಯಮಂತ್ರಿಗಳು ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ನಂತರ ಸದನ ಅನುಮೋದನೆ ನೀಡಿದೆ. ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ, ವರದಿ ಮಂಡನೆ, ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ.

ಅಧಿವೇಶನದಲ್ಲಿ ಧನ ವಿನಿಯೋಗ ವಿಧೇಯಕಗಳು ಸೇರಿದಂತೆ ಒಟ್ಟು ಐದು ವಿಧೇಯಕಗಳು ಸದನದಲ್ಲಿ ಅಂಗೀಕಾರಗೊಂಡಿವೆ. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿರುವ ಹಣಕಾಸಿನ ಹಾಗೂ ಸಾಮಾಜಿಕ ವಲಯದ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಪ್ರಶ್ನೋತ್ತರ ಕಲಾಪ ಗಮನ ಸೆಳೆಯುವ ಸೂಚನೆಗಳು ಕೂಡ ಸನದಲ್ಲಿ ಪ್ರಸ್ತಾಪವಾಗಿವೆ.

ಸದನ ಕಾರ್ಯಕಲಾಪಗಳು ನಡೆಯಲು ಸಹಕರಿಸಿದ ಸಭಾನಾಯಕರಾದ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕರು, ಸಚಿವರು, ಸರ್ಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು, ಶಾಸಕರು, ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟಿಸಿದರು. ನಂತರ ಸದನ ಕಾರ್ಯಕಾಲಪವನ್ನು ರಾಷ್ಟ್ರಗೀತೆ ಹಾಡುವುದರ ಮೂಲಕ ಅನಿರ್ದಿಷ್ಠಾವಧಿಗೆ ಮುಂದೂಡಲಾಯಿತು.  ಇದಕ್ಕೂ ಮುನ್ನ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು, ಸಭಾಧ್ಯಕ್ಷರು, ಸಚಿವರು, ಶಾಸಕರು ಹಾಗೂ ಮಾಧ್ಯಮದವರಿಗೆ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದರು.

Facebook Comments

Sri Raghav

Admin