13 ಅಡಿ ಉದ್ದದ ಚಾಪರ್ ಬೈಕ್ ಸೃಷ್ಟಿಸಿದ ಬೆಂಗಳೂರಿಗ..!

ಈ ಸುದ್ದಿಯನ್ನು ಶೇರ್ ಮಾಡಿ

Bike--01
ಬೆಂಗಳೂರು, ಜು.13-ಉದ್ಯಾನನಗರಿಯ ಸಂಚಾರ ದಟ್ಟಣೆಯಲ್ಲಿ 13 ಅಡಿ ಉದ್ದದ ಬೈಕ್ ಹಾದು ಹೋದರೆ ಹೇಗಿರುತ್ತದೆ..? ಇದನ್ನು ಸಾಧ್ಯವಾಗಿಸಿದ್ದಾರೆ ಬೆಂಗಳೂರಿನ 29 ವರ್ಷದ ಬೈಕ್ ಉತ್ಸಾಹಿ ಝಾಕಿರ್ ಖಾನ್..! ಇದು ವಿಶ್ವದ ಅತ್ಯಂತ ಉದ್ದವಾದ ಬೈಕ್‍ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಝಾಕಿರ್ ಖಾನ್ ಮೂಲತಃ ವಾಸ್ತುಶಿಲ್ಪಿ ಮತ್ತು ಒಳಾಂಗಣ ವಿನ್ಯಾಸಕಾರ (ಇಂಟಿರಿಯರ್ ಡಿಸೈನರ್). ಆದರೆ ಇವರಿಗೆ ಸೂಪರ್‍ಬೈಕ್ ಮತ್ತು ವಿಶಿಷ್ಟ ಪರಿಕಲ್ಪನೆಯ ಬೈಕ್ ವಿನ್ಯಾಸಗೊಳಿಸುವುದು ಹವ್ಯಾಸ. ಪಾಶ್ಚಿಮಾತ್ಯ ದೇಶಗಳಲ್ಲಿ ಅತ್ಯಂತ ಕ್ರೇಜ್ ಹುಟ್ಟಿಸಿರುವ ಚಾಪರ್ ಬೈಕ್‍ನನ್ನು ಇವರು ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಸಿದ್ದಾರೆ. 450 ಕೆಜಿ ತೂಕದ ಈ ಬೈಕ್ ಬರೋಬ್ಬರಿ 13 ಅಡಿ ಉದ್ದ ಮತ್ತು 5.5 ಅಡಿ ಅಗಲವಿದೆ.

Bike--02

ಜೆಪಿ ನಗರದ ಎರಡನೇ ಹಂತದಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ಬಿಡಿಎ ಮೈದಾನದಲ್ಲಿ ಈ ಬೈಕ್ ಇದೇ ನಾಳೆ ಮತ್ತು ನಾಡಿದ್ದು (ಶನಿವಾರ ಮತ್ತು ಭಾನುವಾರ) ಪ್ರದರ್ಶನಗೊಳ್ಳಲಿದೆ. ಒಂದು ಆಸನದ ಈ ಬೈಕ್ ನಿರ್ಮಿಸಲು ಖಾನ್ 7.5 ಲಕ್ಷ ರೂ.ಗಳ ವೆಚ್ಚ ಮಾಡಿದ್ದಾರೆ. ಈ ಬೈಕ್ ವಿನ್ಯಾಸಗೊಳಿಸಲು ನನಗೆ 45 ದಿನಗಳು ಬೇಕಾಯಿತು. 220 ಸಿಸಿ ಬೈಕ್ ಎಂಜಿನ್‍ನನ್ನೇ ನಾವು ಮೇಲ್ಡರ್ಜೆಗೇರಿಸಿ ಹೆಚ್ಚು ಶಕ್ತಿಯುತವನ್ನಾಗಿಸಿದ್ದೇನೆ. ಇದಕ್ಕಾಗಿ ವಿಶೇಷ ಕವಚ ನಿರ್ಮಿಸಲಾಗಿದ್ದು, ಇದು ಗಂಟೆಗೆ 120 ಕಿಮೀ ಗರಿಷ್ಠ ವೇಗದಲ್ಲಿ ಚಲಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

Bike--04

ಈ ಚಾಪರ್ ಬೈಕ್ 6 ಅಡಿಗಳ ಉದ್ದದ ಫೋರ್ಕ್ ಹಾಗೂ ಮುಂಭಾಗದಲ್ಲಿ ಸೈಲೆನ್ಸರ್‍ಗಳನ್ನು ಹೊಂದಿದೆ. ನಾಗರಬಾವಿಯಲ್ಲಿರುವ ತಮ್ಮ ಮನೆಯ ಬಳಿ ವರ್ಕ್‍ಶಾಪ್‍ನಲ್ಲಿ ಇಂದು ನಿರ್ಮಾಣಗೊಂಡಿದೆ. ಮುಂಭಾಗದ ಚಕ್ರ ಚಿಕ್ಕದಾಗಿದ್ದು, ಹಿಂಭಾಗಕ್ಕೆ ಮಿನಿ ಟ್ರಕ್‍ನ ಟೈರ್ ಅಳವಡಿಸಲಾಗಿದೆ.

Bike--03

Facebook Comments

Sri Raghav

Admin