ವಿಪತ್ತು ನಿರ್ವಹಣೆ ತರಬೇತಿ ವೇಳೆಯೇ ವಿದ್ಯಾರ್ಥಿಯನ್ನು ಕಟ್ಟಡದಿಂದ ತಳ್ಳಿದ ತರಬೇತುದಾರ..!

ಈ ಸುದ್ದಿಯನ್ನು ಶೇರ್ ಮಾಡಿ

Lokeshwari--01

ಕೊಯಮತ್ತೂರು, ಜು.13-ವಿಪತ್ತು ಮತ್ತು ದುರ್ಘಟನೆ ಸಂದರ್ಭದಲ್ಲಿ ಸನ್ನದ್ಧತೆ ಬಗ್ಗೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬಳನ್ನು ತರಬೇತುದಾರ ಕಟ್ಟಡದ ಎರಡನೇ ಮಹಡಿಯಿಂದ ಬಲವಂತವಾಗಿ ತಳ್ಳಿದ ಪರಿಣಾಮ ಆಕೆಯ ತಲೆ ಮೊದಲ ಮಹಡಿಯ ಸ ಜಾಗೆ ಬಡಿದು ಘೋರ ಸಾವನ್ನಪ್ಪಿದ ಘಟನೆ ತಮಿಳುನಾಡಿದ ಕೊಯಮತ್ತೂರಿನಲ್ಲಿ ನಿನ್ನೆ ಸಂಭವಿಸಿದೆ. ಲೋಕೇಶ್ವರಿ ದಾರಣವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ.

ಕೊವಯ್ ಕಲೈಮಗಳ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತು. ಈ ವೇಳೆ ಲೋಕೇಶ್ವರಿ ಮತ್ತು ತರಬೇತುದಾರ ಎರಡನೇ ಮಹಡಿಯಲ್ಲಿ ಡೆಮೊಗಾಗಿ ನಿಂತಿದ್ದರು. ಸುರಕ್ಷತೆಗಾಗಿ ಒಂದು ಹಗ್ಗ ಕಟ್ಟಲಾಗಿತ್ತು. ಕೆಳಗೆ ವಿದ್ಯಾರ್ಥಿಗಳು ಬಲೆಯನ್ನು ಹಿಡಿದುಕೊಂಡಿದ್ದರು.

ಈ ಪ್ರಾತ್ಯಕ್ಷಿಕೆಗಾಗಿ ಲೋಕೇಶ್ವರಿ ಆತಂಕದಲ್ಲೇ ಸಜ್ಞಾಗಿದ್ದಳು. ಎರಡನೇ ಮಹಡಿಯಿಂದ ಆಕೆ ಕೆಳಗೆ ಬೀಳುವಾಗ ಆಕೆಯನ್ನು ಬಲೆಯಲ್ಲಿ ರಕ್ಷಿಸುವುದು ಇದರ ಉದ್ದೇಶವಾಗಿತ್ತು. ತರಬೇತುದಾರ ಆಕೆಯನ್ನು ಕೆಳಕ್ಕೆ ತಳ್ಳಿದ. ಆತಂಕದಲ್ಲಿದ್ದ ಆಕೆ ಕೆಳಗೆ ಬಿದ್ದಾಗ ಮೊದಲ ಮಹಡಿಯಲ್ಲಿದ್ದ ಸಜ್ಞಾಗೆ ತಲೆ ಬಡಿದು ದುರಂತ ಸಾವಿಗೀಡಾದಳು. ಇದನ್ನುವಿದ್ಯಾರ್ಥಿಗಳು ವಿಡಿಯೋ ಮಾಡಿದ್ದು, ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಪತ್ತು ನಿರ್ವಹಣಾ ಸಿದ್ಧತೆ ಜಾಗೃತಿ ಸಂದರ್ಭದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ, ಲೋಕೇಶ್ವರಿ ಸಾವು ವಿಧಿ ವಿಪರ್ಯಾಸ.

Facebook Comments

Sri Raghav

Admin