ಸೋಲಾರ್ ಬೇಲಿಗೆ ಸಿಲುಕಿ ನರಳಾಡಿ ಪ್ರಾಣಬಿಟ್ಟ 14 ವರ್ಷದ ಹೆಣ್ಣಾನೆ

ಈ ಸುದ್ದಿಯನ್ನು ಶೇರ್ ಮಾಡಿ

Elephant--01
ಮಡಿಕೇರಿ. ಜು. 13 : ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣು ಕಾಡಾನೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆಗೆ ಸಮೀಪದ ಅಬ್ಬೂರುಕಟ್ಟೆ ಬಳಿಯ ಕಾಡ್ನೂರು ಬಳಿ ನಡೆದ ಘಟನೆ. ತೋಟಕ್ಕೆ ಅಳವಡಿಸಿದ್ದ ಸೋಲರ್ ಬೇಲಿ ದಾಟಿ ಆನೆ ಅರಣ್ಯಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

14 ವರ್ಷದ ಹೆಣ್ಣಾನೆ ಕೊಳ್ಳದಲ್ಲಿ ಮುಗ್ಗರಿಸಿ ಬಿದ್ದು, ಕಾಲುಗಳು ಕೆಸರಿನಲ್ಲಿ ಹೂತು, ಸೊಂಡಿಲು ನೀರಿನೊಳಕ್ಕೆ ಮುಳುಗಿದ ಪರಿಣಾಮ ಉಸಿರುಕಟ್ಟಿ ಸತ್ತಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಎಂ.ಎಸ್‌. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್‌ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಾಡಾನೆಗಳ ಹಿಂಡು ಘೀಳಿಡುತ್ತಿರುವುದರಿಂದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ, ಅವು ಬಾರದಂತೆ ಎಚ್ಚರ ವಹಿಸಿದ್ದಾರೆ. ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದರೂ ಜನರು ಕಾಡಾನೆ ಮೃತದೇಹವನ್ನು ನೋಡಲು ತೆರಳುತ್ತಿದ್ದರು.

Facebook Comments

Sri Raghav

Admin