18ರಿಂದ ಸಿದ್ದರಾಮಯ್ಯ ಬಾದಾಮಿ ಪ್ರವಾಸ

ಈ ಸುದ್ದಿಯನ್ನು ಶೇರ್ ಮಾಡಿ

Siddaramaih--01

ಬೆಂಗಳೂರು,ಜು.13- ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯನವರು ಜು.18ರಿಂದ ತಮ್ಮ ಕ್ಷೇತ್ರದ ಪ್ರವಾಸ ಕೈಗೊಳ್ಳಲಿದ್ದಾರೆ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರದ ಕೆಲಸದ ಒತ್ತಡಗಳು ಕಡಿಮೆಯಿರುವ ಕಾರಣ ಜು.18ರಿಂದ ಬಾದಾಮಿ ಪ್ರವಾಸ ಮಾಡಲಿದ್ದು, ಕ್ಷೇತ್ರ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಸಮಾಲೋಚನೆ ಬಳಿಕ ಜುಲೈ 19 ರ ರಾತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಬಾದಾಮಿ ಕ್ಷೇತ್ರದ ಅಭಿವೃದ್ದಿ ಕಡೆಗೆ ಗಮನ ಕೊಡಲು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಹಾಗೂ ಸಮ್ಮಿಶ್ರ ಸರ್ಕಾರ ರಚನೆ, ಅಧಿವೇಶನಗಳ ಒತ್ತಡಗಳ ಮಧ್ಯೆಯೂ ತಿಂಗಳಿಗೊಮ್ಮೊಯಾದರೂ ಅಲ್ಲಿಯೇ ಇದ್ದು, ಜನರ ಸಮಸ್ಯೆಗಳನ್ನು ಆಲಿಸಲು ತೀರ್ಮಾನಿಸಿದ್ದಾರೆ.

Facebook Comments

Sri Raghav

Admin