ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ಮಾನಸಿಕ ಅಸ್ವಸ್ಥ ವೃದ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

Women-Dead

ಬಂಗಾರಪೇಟೆ, ಜು.13- ಕೆಸರಿನಲ್ಲಿ ಸಿಲುಕಿ ಮಾನಸಿಕ ಅಸ್ವಸ್ಥ ವೃದ್ಧೆ ಸಾವನ್ನಪ್ಪಿರುವ ಘಟನೆ ಹುಣಸನಹಳ್ಳಿ ರೈಲ್ವೆ ಅಂಡರ್‍ಪಾಸ್‍ನಲ್ಲಿ ನಡೆದಿದೆ. ತಾಲ್ಲೂಕಿನ ನರೀನತ್ತ ಗ್ರಾಮದ ಗೌರಮ್ಮ (80) ಮೃತಪಟ್ಟ ವದ್ಧೆ. ಗೌರಮ್ಮ ಆಕಸ್ಮಿಕವಾಗಿ ರೈಲ್ವೆ ಅಂಡರ್‍ಪಾಸ್‍ನತ್ತ ತೆರಳಿದ್ದು ಕಾಲು ಜಾರಿ ಹೊಂಡಕ್ಕೆ ಬಿದ್ದು ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. ಮೇಲೆ ಏಳಲಾಗದೆ ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಬಂಗಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin